Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, July 17, 2019

ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ - ಇಂದ್ರಜಿತ್

  Sandeep T Gowda       Wednesday, July 17, 2019

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಮಂಜುಳಾಗುರುರಾಜ

ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ

ಹೊಟ್ಟೆಪಾಡಿಗಾಗಿ ಅರ್ಧ ಬೆತ್ತಲೇ ಕುಣಿಯುವಾಗ ಮೇಲೆ ಅರ್ಧ ಕತ್ತಲೇ
ಕದ್ದು ನೋಡುವಾ ಈ ಕಳ್ಳರ ಕಲೆ ಅರ್ಥವಾದ ಮೇಲೆ ಚಿಂತೆ ಮಾಡಲೇ
ನೀರಿಗಿಳಿದ ಮೇಲೆ ಛಳಿಯ ಚಿಂತೆಯೇ ಕುಣಿಯುತಿರುವೇ ನಾನು ತಾಳದಂತೆಯೇ
ಈ ವಿಲಾಸದ ವಿನೋದದ ಆ ಸೆರೆಮನೆಯಲ್ಲಿ ಬಂಧೀ...
 ಬಂಧೀ..ಆದ ಸುದ್ದಿ
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ

ಬುದ್ದಿ ಹೇಳುವಾ ಎಲ್ಲ ಬುದ್ಧಿವಂತರೂ ದುಡ್ಡು ಮಾಡಲೆಂದೇ ಹಿಂದೆ ಬಂದರೂ
ನೀತಿ ಹೇಳುವಾ ಎಲ್ಲಾ ನ್ಯಾಯವಂತರೂ ನನ್ನ ಚಿತ್ರ ತೋರಿ ಮುಂದೆ ಬಂದರೂ
ಬೀಜದಲ್ಲಿ ಒಂದು ವೃಕ್ಷವಿಲ್ಲದೇ ಈ ನೋಟದಲ್ಲಿ ಒಂದು ಲಕ್ಷವಿಲ್ಲದೇ
ಈ ಪ್ರಲೋಪದ ಪ್ರಪಾತದ ಕೆಳಗಡೆ ಇರುವೇ..ಬರುವೇ...
ನಾ ಬರುವೇ  ಚುಕ್ಕಿ ತರುವೇ
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ  ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ
logoblog

Thanks for reading ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ - ಇಂದ್ರಜಿತ್

Previous
« Prev Post

No comments:

Post a Comment

Note: Only a member of this blog may post a comment.