ಹೂವಾ ರೋಜಾ ಹೂವಾ
ಸಾಹಿತ್ಯ: ಹಂಸಲೇಖ
ಗಾಯಕರು: ಮನೂ
ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
ಕಣ್ಣಲ್ಲಿ ಸೂರ್ಯಕಾಂತಿ ತುಟಿಯಲ್ಲಿ ಚೆಂಗುಲಾಬಿ
ಮೈಯೆಲ್ಲ ಕೆಂಡಸಂಪಿಗೆ ಮಾತೆಲ್ಲ ಮಲ್ಲೆ ಜಾಜಿ
ನಗುವೆಲ್ಲ ದುಂಡು ಮಲ್ಲೆ ಮನಸೆಲ್ಲ ರಾತ್ರಿ ರಾಣಿ
ಹೂವಿಗೆ ಜೇನು ತಾನೆ ಜೀವ ಪ್ರೀತಿಗೆ ನಾನು ತಾನೆ ಜೀವ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
ಇರುಳಲ್ಲಿ ಮೊಗವ ಮುಚ್ಚಿ ಹಗಲೆಲ್ಲ ಮೊಗವ ಬಿಚ್ಚಿ
ನಲಿದಾವೊ ಎಲ್ಲ ಹೂವ ಮನಸಲ್ಲಿ ಪ್ರೀತಿ ಮುಚ್ಚಿ
ಮೊಗದಲ್ಲಿ ಬಿಂಕ ಬಿಚ್ಚಿ ನುಲಿದಾಳು ನನ್ನ ಹೂವ
ಹೂವಿಗೆ ಬಣ್ಣ ತಾನೆ ಅಂದ ಹೆಣ್ಣಿಗೆ ಜಂಭ ತಾನೆ ಚಂದ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ
ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
No comments:
Post a Comment
Note: Only a member of this blog may post a comment.