Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, July 17, 2019

ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ - ಇಂದ್ರಜಿತ್

  Sandeep T Gowda       Wednesday, July 17, 2019

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ :  ಎಸ್ ಪಿ ಬಿ ,

ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ 

ಓ.. ಗಂಡನೇ ನಿನಗಿದು ದಂಡನೇ ನನ್ನ ಬಯಕೆ ಮುರಿದೇ
ಈ ಪ್ರೇಮ ಪರದೆ ಹರಿದೇ ನಾ ಆದಕೆ ಹಿಂದೆ ಸರಿದೇ
ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ
ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ
ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು
ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು
ಅಹ್ಹಹ್ಹಾ.. ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಅರೇರೆರೆ ಹುಸಿ ಕೋಪತುಳುಕುವವಳೇ     

ಹೂ ಹಾಸಿಗೆ ಬಾ ಕಾದಿದೇ ಮಧುಚಂದ್ರಕೇ ಬಾ ಕರೆದಿದೇ
ಬೆಕ್ಕಣ್ಣ ಅಡುಗೆಮನೆಗೆ ಬಂದಿಹನು ಕೇಳಿಸಿತು ಕಿವಿಗೇ
 ಅಯ್ಯಯ್ಯೋ ಕಾದಿಹ ಹಾಲು ಆಗುವುದು ಬೆಕ್ಕಿನ ಪಾಲು
ಏನಾಯಿತೇ.. ಏಕಾಯಿತೇ..
ನೋವಾಯಿತೇ... ಸಾಕಾಯಿತೇ..
ಈ ಆಸೆಯೇ.. ಹಾಳಾಯಿತೇ..
ಈ.. ರಾತ್ರಿಯೇ.. ಹೀಗಾಯಿತೇ...     
ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ

ಬಾಗಿಬಳುಕುವವಳೇ ಅಯ್ಯಯ್ಯೊ ಹುಸಿ ಕೋಪತುಳುಕುವವಳೇ     
ಉಪಾಯಗಾರನ ತಂತ್ರಗಳೆಲ್ಲಾ ನನ್ನಲ್ಲಿ ನಡೆಯೋಲ್ಲಾ
ಅಪಾಯವಾದರೇ ನಿನ್ನಾಣೆ ನಾನು ಎಂದೆಂದೂ ಹೊಣೆಯಲ್ಲಾ
ವಿನೋದ ತುಂಬಿದ ಬಣ್ಣದ ಮಾತಿಗೆ ಎಂದೆಂದೂ ನಾನು ಸೋಲಲ್ಲಾ
ಚಿನ್ನಾರಿ ನಾನೇ ಸೋತೆನು ಬಾರೇ ಈ ಕೋಪ ಸರಿಯಲ್ಲಾ

ಆ.. ನಲ್ಲಿಯೂ ಕೂ ಎಂದಿದೇ  ನಾ ಹೋಗಲೇ ಬೇಕಾಗಿದೆ
ಆಮೇಲೆ ಹೋಗುವೆಯಂತೇ ಈಗೇಕೆ ನಲ್ಲಿಯ ಚಿಂತೇ
ಅಯ್ಯಯ್ಯೋ ನಾಳೆಗೆ ಏನೋ ಸ್ನಾನಕ್ಕೆ ಮಾಡುವುದೂ ಏನೋ
ನೀನಿದ್ದರೂ  ಬಾಯಾರಿದೇ 
ನೀರಿಲ್ಲದೇ ಬಾಳೆಲ್ಲಿದೇ       
ಬೆಳಗಾಯಿತೇ...   ಇರುಳು ಒಡಿತೇ ಹೇ..
ಹೋಳಾಯಿತೇ...  ಹಾಳಾಯಿತೇ

ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ 
ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ
ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ
ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು
ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು 
logoblog

Thanks for reading ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ - ಇಂದ್ರಜಿತ್

Previous
« Prev Post

No comments:

Post a Comment

Note: Only a member of this blog may post a comment.