Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, July 13, 2019

ನಲಿಯುತಾ ಹೃದಯ ಹಾಡನು ಹಾಡಿದೆ - ಹೃದಯ ಹಾಡಿತು

  Sandeep T Gowda       Saturday, July 13, 2019

ಹೃದಯ ಹಾಡಿತು (1991) - ನಲಿಯುತಾ ಹೃದಯ ಹಾಡನು ಹಾಡಿದೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ| ರಾಜ್‍ಕುಮಾರ್

ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ

ಬಾನಲ್ಲಿ ಬೆಳಕಿಂದು ಮೂಡಿದೆ  ಬೆಳಕಲ್ಲಿ ಹೊಸಬಾಳು ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ  ಹೊಸಆಸೆ ಜೊತೆಯೊಂದ ಕೇಳಿದೆ
ಬರಡಾದ ಲತೆಯೀಗ ಹಸಿರಾಗಿದೆ  ಹೊಸಜೀವ ಬಂತೆಂದು ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ   ಹೊಸಜೀವ ಬಂತೆಂದು ಕುಣಿದಾಡಿದೆ
ಬೆಳಗಿನ ರವಿಯು ಮೂಡಿದ ಬಾನಲಿ ಬೆಳಗಿನ ತೆರೆಯ ಹಾಸಿದ ಬಾಳಲಿ

ಆ ಚಂದ್ರ ಮೇಲಿಂದ ಬಂದನೂ  ತಂಪಾದ ಬೆಳಕನ್ನು ತಂದನೂ
ಅನುರಾಗದಾನಂದ ತುಂಬುತಾ  ಜೊತೆಯಾಗೆ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ  ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವು  ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ನಲಿಯುತ ಹೃದಯ ಹಾಡನು ಹಾಡಿದೆ  ನಯನವು ಬಯಕೆ ಸಾವಿರ ಹೇಳಿದೆ
logoblog

Thanks for reading ನಲಿಯುತಾ ಹೃದಯ ಹಾಡನು ಹಾಡಿದೆ - ಹೃದಯ ಹಾಡಿತು

Previous
« Prev Post

No comments:

Post a Comment

Note: Only a member of this blog may post a comment.