Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, July 16, 2019

ಬೆಳ್ಳಿರಥದಲಿ ಸೂರ್ಯ ತಂದ ಕಿರಣ - ಇಂದ್ರಜಿತ್

  Sandeep T Gowda       Tuesday, July 16, 2019



ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಎಸ್ ಪಿ ಬಿ , ಬಿ.ಆರ್.ಛಾಯ


 ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
  ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
  ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಮೇಘ ಶಾಮನ ಮುರುಳಿಲೋಲನ ಪ್ರೀತಿ ಒಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶೃತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ

ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯಾ ಕಟ್ಟುವೆನು
ಮುಗಿಲ ಮಿಂಚನೇ ತಂದಿರಿಸೇ ದೀಪಾ ಹಚ್ಚುವೆನೂ

ಕರಗಿದೆ ನಿನ್ನ ಒಲವಿಗೆ ಹೂ ಹಾಸುವೇ ನಿನ್ನ ಹಾದಿಗೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಹಗಲು ಇರುಳಲಿ ಬಿಸಿಲು ಮಳೆಯಲು ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ

ಭೂಮಿ ಬೀರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ ಕಾಣಲು ಬಲು ಚೆನ್ನ

ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
logoblog

Thanks for reading ಬೆಳ್ಳಿರಥದಲಿ ಸೂರ್ಯ ತಂದ ಕಿರಣ - ಇಂದ್ರಜಿತ್

Previous
« Prev Post

No comments:

Post a Comment

Note: Only a member of this blog may post a comment.