Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, July 13, 2019

ಓ ನನ್ನ ಮಲ್ಲಿಗೆ - ಹೃದಯ ಹಾಡಿತು

  Sandeep T Gowda       Saturday, July 13, 2019

ಹೃದಯ ಹಾಡಿತು (1991) - ಓ ನನ್ನ ಮಲ್ಲಿಗೆ
ರಚನೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್.ಪಿ.ಬಾಲಸುಬ್ರ್ಹಹ್ಮಣ್ಯಂ

ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ

ನಮಗಾಗಿ ಮಂಚ ನನಗಾಗಿ ಕೊಂಚ  ಕೊಡಲಾರೆಯ ನೀ ಜಾಗವ
ಅಗೋ ಚಂದ್ರಕಾಂತಿ ನನಗೆಲ್ಲಿ ಶಾಂತಿ ಶಶಿ ಈಗ ಏನು ಮಾಡುವ
ಜೊತೆಯಾಗಿ ನಾವು ನೋಡುವ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ

ಸಿಹಿಯಾದ ಹೊತ್ತು ಹೂಂ..  ತುಟಿಗೊಂದು ಮುತ್ತು
ಕೊಡಬೇಕೆಂದು ಎಂಬ ಆಸೆಯು
ಬಿಸಿಯೇರಿದಾಗ ಹಾಯ್.. ಮನ ಕೂಗುವಾಗ
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡುವ ಮೋಡಿಯು
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಸ್.. ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
logoblog

Thanks for reading ಓ ನನ್ನ ಮಲ್ಲಿಗೆ - ಹೃದಯ ಹಾಡಿತು

Previous
« Prev Post

No comments:

Post a Comment

Note: Only a member of this blog may post a comment.