Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Saturday, July 13, 2019

ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ - ಹೃದಯ ಹಾಡಿತು

  Sandeep T Gowda       Saturday, July 13, 2019

ಹೃದಯ ಹಾಡಿತು (1991) - ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಎಸ್.ಪಿ.ಬಿ.

ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ

ಹರಸುವೆನು ಪ್ರೀತಿಯಲಿಂದು  ಸುಖವಾಗಿ ಬಾಳು
ಹರಸುವೆನು ಪ್ರೀತಿಯಲಿಂದು  ಸುಖವಾಗಿ ಬಾಳು
ಬದುಕಿನಲಿ ಸಂತಸ ತರುವ  ಸವಿಮಾತೆ ಕೇಳು
ಕನಸಲ್ಲು ನೋಯದ ಹಾಗೆ  ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ
ನಯನಗಳು ಹೀಗೆಯೆ ಎಂದೂ  ಹೊಸ ನೋಟ ನೋಡಿ
ಮನಸಿನಲಿ ಸಂಭ್ರಮ ತುಂಬಿ  ಹೊಸ ಗೀತೆ ಹಾಡಿ
ಧ್ರುವತಾರೆ ಮಿನುಗುವ ಹಾಗೆ  ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ   ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ  ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
logoblog

Thanks for reading ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ - ಹೃದಯ ಹಾಡಿತು

Previous
« Prev Post

No comments:

Post a Comment

Note: Only a member of this blog may post a comment.