ಜಂಗ್ಲಿ(2009) - ನೀನೆಂದರೆ ನನ್ನೊಳಗೆ
ಚಿತ್ರಗೀತೆ | ಜಂಗ್ಲಿ | ಜಯಂತ ಕಾಯ್ಕಿಣಿ | ೨೦೦೯
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ
ನೀನೇ ಒಂದು ಸಂಕಲನ
ಓ ಜೀವವೇ ಹೇಳಿಬಿಡು
ನಿನಗೂ ಕೂಡ ಹೀಗೇನಾ?
ತಂದೆನು ಪಿಸುಮಾತು ಜೇಬಲ್ಲಿ
ಕಂಡೆನು ಹಸಿಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ
ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು
ನೀರ ಮೇಲೆ ಬರೆಯಲೇನು?
ನಿನ್ನ ನೆರಳು ಸುಳಿಯುವಲ್ಲೂ
ಹೂವ ತಂದು ಸುರಿಯಲೇನು?
ನಂಬಿ ಕೂತ ಹುಂಬ ನಾನು
ನೀನೂ ಹೀಗೇನಾ? ||೧||
ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ
ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ
ಬಂದು ಪಾರು ಮಾಡು ನೀನು
ಒಂದೇ ಕನಸು ಕಾಣುವಾಗ
ನಾನು ನೀನು ಬೇರೆಯೇನು?
ಶರಣು ಬಂದ ಚೋರ ನಾನು
ನೀನು ಹೀಗೇನಾ?||೨||
No comments:
Post a Comment
Note: Only a member of this blog may post a comment.