ಜೋಡಿ ಹಕ್ಕಿ (1997) - ಲಾಲಿ ಸುವ್ವಾಲಿ
ಚಿತ್ರಗೀತೆ | ಜೋಡಿ ಹಕ್ಕಿ | ೧೯೯೭
ಸಂಗೀತ: ವಿ ಮನೋಹರ್
ಗಾಯಕ: ಎಲ್ ಎನ್ ಶಾಸ್ತ್ರಿ
ಲಾಲಿ ಸುವ್ವಾಲಿ
ಹಾಡೆಲ್ಲ ಲಾಲಿ
ನನ್ನ ಚೆಲುವಿಗೆ ಸರದಾರ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ
ಕೇಳೆ ಚಿಂಗಾರಿ
ಒಂದು ಮಾತಾಡೊ
ಹೂವ ಕಂಡೆ ನಾನು
ಬಾಡದಂಥ
ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ
ಎಲ್ಲ ಬರಿ ಜೇನು
ಇನ್ನು ಇದಕಿನ್ನ
ದೊಡ್ಡದಲ್ಲ ಏನು
ನನ್ನ ಬಾಳ
ಸಂತೋಷವೆಲ್ಲ ನೀನೆ
ನನ್ನ ಹಾಡು
ಸಂಗೀತವೆಲ್ಲ ನೀನೆ
ನನ್ನುಸಿರು ಪ್ರಾಣ ಬದುಕು
ಎಲ್ಲ ನೀನಮ್ಮ
ನನ್ನಾಸೆ ಕನಸ ಉಳಿಸೊ
ಜೀವ ನೀನಮ್ಮ
ನಿದಿರೆಯ ದೇವಿ
ಹಾಡ್ಯಾಳೆ ಲಾಲಿ
ಹಾಯಾಗಿ ಮಲಗೆ
ಜೋಗುಳ ಕೇಳಿ
ಯಾವ ಜನುಮಾದ ಬಂಧ
ನಮ್ಮ ಜೋಡಿ
ನಾನು ನಿನ್ನ ನೀ ನನ್ನ
ಜೀವ ನಾಡಿ
ಹೋ ಮೇಲೆ ಮುಕ್ಕೋಟಿ
ದೈವವೊಮ್ಮೆ ನೋಡಿ
ತುಂಬು ಹಾರೈಸುವರು
ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
ಅದನೆಂದು ಕಾಯಬೇಕು ನಿತ್ಯ ಹಿಂಗೆನೆ
No comments:
Post a Comment
Note: Only a member of this blog may post a comment.