ಜೋಡಿ ಹಕ್ಕಿ(1997) - ಹರ ಹರ ಗಂಗೆ
ಚಿತ್ರಗೀತೆ | ಜೋಡಿ ಹಕ್ಕಿ | ೧೯೯೭
ಸಂಗೀತ: ವಿ ಮನೋಹರ್
ಗಾಯನ: ಡಾ ರಾಜ್ಕುಮಾರ್
ಹೇ ಹೇ ಹೇ ಹೇ
ಆಆಆಆಆಆ
ಹರ ಹರ ಗಂಗೆ
ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ
ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ
ಹಾಲು ನಂಜಾಯ್ತೊ ... ೨
ಹೇ ಕಂಗಳ ಕೊಟ್ಟೆ
ದಿಟ್ಟಿಯ ಕಿತ್ತೆ
ಕನಸುಗಳೆಲ್ಲ ಕಪ್ಪಾಯ್ತು
ಗುಂಡಿಗೆ ಕೊಟ್ಟೆ
ಪ್ರೀತಿಯ ಕಿತ್ತೆ
ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರು ಹ್ಯಾಂಗೆ
ಕಣ್ಣಿಗೆ ಚುಚ್ಚೊಕಾಗುತ್ತ
ಒಡಲಿನ ಬೆಂಕಿ ಆದ್ರು ಕೂಡ
ಮಡಿಲಲ್ಲ್ ಮಡುಗೋಕಾಗುತ್ತ
ಏನೇನು ಕೊಟ್ಟೆ ಶಿವನೇ
ಮಾಯ ಬಂಢಾರದವನೆ
ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ
ಈ ಜನ್ಮಕ್ಕಿಂಗೆ ತೋರ್ಸವ್ನೇ
ಹರ ....
ಹೇ ರೂಪವ ಕೊಟ್ಟೆ ರೂಪದ ಕೂಡೆ ಶಾಪವ ಕೊಟ್ಟೆ ಯಾಕ್ ಹೇಳು
ಚಂದದ ಹೂವು ಸಂಜೆಗೆ ಬಾಡಿ ಹೋಗೊದ್ ಯಾಕೆ ನೀ ಹೇಳು
ಮುದ್ದಿನ ಮುತ್ತು ಎದೆಯೊಳ್ಗಿಟ್ಟು ಮಾಡಿದೆ ನಾನು ಜೋಪಾನ
ಅಯ್ಯೊ ವಿಧಿಯೆ ಮುತ್ತೊಡೆದೊಯ್ತು ಯಾರಿಗೆ ದುಖಃ ಹೇಳೋಣ
ನನ್ನಾಸೆ ಬಳ್ಳಿ ಕುಸುಮಾ ಬೆಂದೋಗಿ ಬೂದಿ ಆಯಿತೆ
ಮನಸಾರೆ ಆತ್ತು ಬಿಡಲೆ ಹ್ಯಾಗಳ್ಳ್ಲಿ ಶಿವನೆ ಕಣ್ಣೀರೆ ಬತ್ತಿ ಹೋಗೈತೆ
ಹರ ....
No comments:
Post a Comment
Note: Only a member of this blog may post a comment.