ಜೀವನದಿ (1996) - ಕನ್ನಡ ನಾಡಿನ ಜೀವನದಿ ಕಾವೇರಿ
ಆರ್.ಎನ್.ಜಯಗೋಪಾಲ್ | ಚಿತ್ರಗೀತೆ | ಜೀವನದಿ | ೧೯೯೬
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ?
ಗಾಯನ: ಚಿತ್ರಾ, ಎಸ್. ಪಿ. ಬಾಲಸುಬ್ರಹ್ಮಣ್ಯಂ
ಆ....ಆ....ಆ....
ಗಂಗೆಯ ತುಂಗೆಯ ಪ್ರೀತಿಯ ಸೋದರಿ
ಪಾವನೆ ಪುಣ್ಯನದಿ
ಬಳುಕುತ ಕುಲುಕುತ ಹರುಷವ ಚೆಲ್ಲುತ
ಸಾಗುವ ಧನ್ಯ ನದಿ
ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯನದಿ
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ
ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೆ
ಭಾಗ್ಯದಾ ದಾತೆಗೆ
ಮಾಡುವೆ ಭಕ್ತಿಯಾ ವಂದನೇ ಓ...
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ...
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ
ಲಜ್ಜೆಯು ಅಳಿಯದು
ಮೀರುತಾ ಸಾಗಿಸಿ
ಸಾಗರ ಹರಸಿದೆ
ತನ್ನನೆ ಮರೆತು, ಕಡಲಲೆ ಬೆರೆತು
ಧನ್ಯವು ತಾನಾಗಿದೆ
ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮಾ ಹಾಡಾಗಿದೆ
ಕನ್ನಡ ನಾಡಿನ ಜೀವನದೀ ಈ ಕಾವೇರಿ
ಓ ಹೋ ಹೋ ಜೀವನದೀ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓ ಹೋ ಹೋ ಸುಖವ ತರೋ ಈ ಸಿಂಗಾರಿ
ಈ ತಾಯಿಯೂ ನಕ್ಕರೇ
ಸಂತೋಷದಾ ಸಕ್ಕರೇ
ಮಮತೆಯಾ ಮಾತೆಗೇ
ಭಾಗ್ಯದಾ ದಾತೆಗೇ
ಮಾಡುವೆ ಭಕ್ತಿಯಾ ವಂದನೇ....ಏ.....ಓ.....
No comments:
Post a Comment
Note: Only a member of this blog may post a comment.