ಜೀವನ ಚಕ್ರ(1985) - ಆನಂದ ಆನಂದ ಆನಂದವೇ
ಚಿ. ಉದಯಶಂಕರ್ | ಚಿತ್ರಗೀತೆ | ಜೀವನ ಚಕ್ರ | ೧೯೮೫
ಗಾಯಕರು: ಎಸ್.ಪಿ.ಬಿ ಮತ್ತು ಎಸ್ ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಹೇ ಹೇ ಆಹಹ ಆಆ ಆ ಹಾಹಾ
ಆಹಾಹಾ ಆಹ ಆಹ ಆಹ
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತಿ ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು ಕೇಳಿದೆ
ಹೊಸ ಬಾಳು ಹೊಸ ರೀತಿ ಹೊಸ ದಾರಿ ಹೊಸ ಪ್ರೀತಿ ಗೆಳತಿ ನೋಡಿದೆ
ಹೊಸ ರಾಗ ಹೊಸ ತಾಳ ಹೊಸ ಭಾವ ಹೊಸ ಮಾತು ಇಂದು ಕೇಳಿದೆ
ಸವಿಯಾದ ನುಡಿಯಿಂದ ಹಿತವಾದ ಹಾಡಿಂದ ಹೊಸ ನೋಟ ನೋಡಿದೆ ಎಲ್ಲಾ ಚೆಂದವೇ
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ಆಹ ಹಹಹ ಆಹಾ ಹಹಹ
ಆಹ ಆಹಹ ಹಹಹ ಹಹಹ
ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲೆಲ್ಲ ಜೇನಾಗಿ ಆ ಜೇನು ನಿನಗಾಗಿ ಇನಿಯ ಇಲ್ಲಿದೆ
ನನ್ನಾಸೆ ಮೊಗ್ಗಾಗಿ ಆ ಮೊಗ್ಗು ಹೂವಾಗಿ ಕಂಪು ಚೆಲ್ಲಿದೆ
ಒಡಲೆಲ್ಲ ಜೇನಾಗಿ ಆ ಜೇನು ನಿನಗಾಗಿ ಇನಿಯ ಇಲ್ಲಿದೆ
ತನುವೆಲ್ಲ ಬಂಗಾರ ಮನವೆಲ್ಲಾ ಬಂಗಾರ ಗುಣದಲ್ಲೂ ಚಿನ್ನವೇ ಎಂಥಾ ಭಾಗ್ಯವೇ
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
ನಾನು ನೀನು ಎಂದು ಹೀಗೆ ಸ್ನೇಹದಿ ಸೇರಲು
ಆನಂದ ಆನಂದ ಆನಂದವೇ
ನೀ ತಂದ ಪ್ರೀತಿಯಿಂದ ನೀ ತಂದ ಬಾಳಿನಿಂದ
No comments:
Post a Comment
Note: Only a member of this blog may post a comment.