ಜಿಮ್ಮಿ ಗಲ್ಲು(1982)....ದೇವ ಮಂದಿರದಲ್ಲಿ
ಚಿ. ಉದಯಶಂಕರ್ | ಚಿತ್ರಗೀತೆ | ಜಿಮ್ಮಿ ಗಲ್ಲು | ೧೯೮೨
ಚಿತ್ರ :ಜಿಮ್ಮಿ ಗಲ್ಲು(1982)
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಮತ್ತು ವಾಣಿ ಜಯರಾಂ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ವಾಣಿ ಜಯರಾಂ:
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ವಾಣಿ ಜಯರಾಂ:
ಸತ್ಯವೇ ಗೆಲುವುದು ಧರ್ಮವೇ ನಿಲುವುದು
ಎನ್ನುವುದೆಲ್ಲ ಮಾತುಗಳು ಬರಿ ಮಾತುಗಳು
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ಮೋಸ ವೇ ಉಳಿವುದು ದ್ರೋಹವೇ ಗೆಲುವುದು
ಎನುವುದ ಅರಿತೆ ಬಾಳಿನೊಳು ನನ್ನ ಬಾಳಿನೊಳು
ವಾಣಿ ಜಯರಾಂ:
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೇ
ಇಂದು ನಾ ನೊಂದೇ ನಾ ಬಲು ನೊಂದೇ
ವಾಣಿ ಜಯರಾಂ:
ಆಸೆಯ ಅರಮನೆ ಬೆಂಕಿಗೆ ಸಿಲುಕಲು
ನಾ ಬೆಂದೆ ನಾ ಬಲು ನೊಂದೇ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ವಾಣಿ ಜಯರಾಂ:
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ವಾಣಿ ಜಯರಾಂ:
ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ ನಾ ಬಲಿಯಾದೆ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ಒಲವಿನ ಸಿಹಿಯನು ಪಡೆಯುವ ಮೊದಲೇ
ಸಾವಿನ ಉರುಳಿಗೆ ಸೆರೆಯಾದೆ ನಾ ಸೆರೆಯಾದೆ
ವಾಣಿ ಜಯರಾಂ:
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
No comments:
Post a Comment
Note: Only a member of this blog may post a comment.