ಚಿ. ಉದಯಶಂಕರ್ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾಗ್ಯದ ಲಕ್ಷ್ಮಿ ಬಾರಮ್ಮ | ೧೯೮೬
ಯಾವ ಕವಿಯೂ ಬರೆಯಲಾರ.. ಯಾವ ಕವಿಯೂ ಬರೆಯಲಾರ..
ಒಲವಿನಿಂದ ಕಣ್ಣೋಟದಿಂದ ಹೃದಯದಲ್ಲಿ ನೀ.. ಬರೆದ
ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ..ಬರೆಯಲಾರ
ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ
ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ
ಮಲ್ಲೆ ಹೂ ಅರಳಿದಂತೆ.. ಚಂದ್ರ ಕಾಂತಿ ಚೆಲ್ಲಿದಂತೆ
ಮಲ್ಲೆ ಹೂ ಅರಳಿದಂತೆ.. ಚಂದ್ರ ಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು ..ಸುಖವ ಕಾಣುವಂತೆ..
ಯಾವ ಕವಿಯೂ ಬರೆಯಲಾರ.. ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ.. ಬರೆದ ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ
ಪ್ರೇಮ ಸುಮವೂ ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ.
ಪ್ರೇಮ ಸುಮವೂ ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ.
ಕಂಗಳೆರಡು ಧುಂಬಿಯಾಗಿ ಭ್ರಮರ ಗೀತೆ ಹಾಡುವಂತೆ
ಕಂಗಳೆರಡು ಧುಂಬಿಯಾಗಿ ಭ್ರಮರ ಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡು ಸನಿಹ ಸೇರಿದಂತೆ..
ಯಾವ ಕವಿಯೂ ಬರೆಯಲಾರ.. ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ.. ಬರೆದ ಈ ಪ್ರೇಮ ಗೀತೆಯಾ..ಯಾವ ಕವಿಯೂ ಬರೆಯಲಾರ..ಬರೆಯಲಾರ
No comments:
Post a Comment
Note: Only a member of this blog may post a comment.