Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಇವಳೇ ಅವಳು ಕನಸಲಿ ಬಂದವಳು..

  Sandeep T Gowda       Tuesday, January 17, 2012
==========================
ಸಾಹಿತ್ಯ: ಇಟಗಿ ಈರಣ್ಣ
ಹಾಡಿದವರು: ಹರಿಹರನ್
ಸಂಗೀತ: ಹಂಸಲೇಖ
ಚಿತ್ರ: ಸ್ಪರ್ಶ

==========================

ಇವಳೇ ಅವಳು ಕನಸಲಿ ಬಂದವಳು..
ಅವಳೇ ಇವಳು ಮನದಲಿ ನಿಂದವಳು

ಚೆಲುವೆ ಅಂದ ಸೆಳೆದವೇಳೆ
ನನ್ನ ಹೃದಯ ಪುಟದ ಮೇಲೆ
ಕವಿತೆ ಬರೆದವಳು..

ಇವಳೇ ಅವಳು ಕನಸಲಿ ಬಂದವಳು..
ಅವಳೇ ಇವಳು ಮನದಲಿ ನಿಂದವಳು..

ಮೆಲ್ಲ ಮೆಲ್ಲ ನಡೆಯಲು ನೀ..
ನವಿಲು ನಾಚಿ ನೋಡುತಿದೆ
ಚೆಲ್ಲಿದಂತೆ ಚೆಲುವನು ನೀ..
ಸುಮವು ಸೆಳೆದು ಸವಿಯುತಿದೆ

ನಿನ್ನಾ ನೋಡಿ ಕಲಿಯಲಿ ಲತೆ ಬಿಂಕಾ..
ನಾಚಿ ನಗಲು ಅಲೆಯಲೇ ಸಂಗೀತ..
ನಿನ್ನ ಅಂದ ಗಂಧದಿಂದ ಭ್ರಮಿಸಿ ಬಂದ
ಭ್ರಮರ ಒಂದು ಮಧುವ ಅರಸುತಿದೆ..

ಇವಳೇ ಅವಳು ಕನಸಲಿ ಬಂದವಳು..
ಅವಳೇ ಇವಳು ಮನದಲಿ ನಿಂದವಳು..

ಸುತ್ತ ಮುತ್ತ ಮುತ್ತಲ್ಲಿ
ನಿನ್ನ ಸುತ್ತ ನಾನಿರುವೆ...
ನನ್ನ ಪುಟ್ಟ ಆಸೆಗೆ ನೀ..
ಉಸಿರು ತುಂಬಿ ಬೇಳಿಸಿರುವೆ..

ನೀನೆ ನನ್ನ ತನು ಮನ ಮಿಡಿದವಳು..
ನೀನೆ ನನ್ನ ಅನುದಿನ ಸೆಳೆದವಳು.
ಇಂದು ಮುಂದು ಎಂದು ಬಂದು
ಹೃದಯ ತುಂಬಾ ತುಂಬಲೆಂದು
ಪ್ರೇಮ ತಂದವಳು

ಇವಳೇ ಅವಳು ಕನಸಲಿ ಬಂದವಳು..
ಅವಳೇ ಇವಳು ಮನದಲಿ ನಿಂದವಳು..
logoblog

Thanks for reading ಇವಳೇ ಅವಳು ಕನಸಲಿ ಬಂದವಳು..

Previous
« Prev Post

No comments:

Post a Comment

Note: Only a member of this blog may post a comment.