Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ವಿರಹಿಣಿ - ಕೆ ಎಸ್ ನರಸಿಂಹಸ್ವಾಮಿಯವರು

  Sandeep T Gowda       Tuesday, January 17, 2012
ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆ
ವಿರಹಿಣಿ..........ಕವನ ಸಂಕಲನ-ಮೈಸೂರ ಮಲ್ಲಿಗೆ
--------------------------------------
ಹನ್ನೆರಡು ದುಃಖಗಳು ನನ್ನಾಹುತಿಗೊಂಡಿವೆ;
ಮಲಗಿ ಮರೆಯುವೆನೆಲ್ಲ ಎಂಬಾಸೆ ಒಂದು ಗಳಿಗೆ.
ಹಾಸಿ ಹೊದ್ದಿಸಿದಳಲು ನಿದ್ದೆಯನು ಕಣ್ಗೆ ಬಿಡದೆ,
ನಾನಿಲ್ಲಿ ಕೊರಗುವೆನು ಮೆತ್ತೆಯಲಿ ಮೆತ್ತಗಾಗಿ.
ನನ್ನ ಗುಡಿಸಿಲ ಮೇಲೆ ಮಲಗಿಹುದು ಬೆಳ್ಳಿಬೆಳಕು.
ಅರೆಬೆಳೆದ ಚಂದಿರನ ತಂಪಾದ ಎಳೆಯ ಬೆಳಕು.
ನನ್ನಿಯ, ನಿನ್ನನೇ ಬಯಸುವೆನು; ಅಗಲಿ, ಕೊರಗಿ
ನಾನಿಲ್ಲಿ ಕರಗುವೆನು ದುಃಖದಲಿ ತೇಲಿ ಮುಳುಗಿ.

- ಕೆ ಎಸ್ ನರಸಿಂಹಸ್ವಾಮಿಯವರು

logoblog

Thanks for reading ವಿರಹಿಣಿ - ಕೆ ಎಸ್ ನರಸಿಂಹಸ್ವಾಮಿಯವರು

Previous
« Prev Post

No comments:

Post a Comment

Note: Only a member of this blog may post a comment.