Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 27, 2012

ಅತ್ತಿಯಮರವಾ ಕಿತ್ತು

  Sandeep T Gowda       Friday, January 27, 2012
ಅತ್ತಿಯಮರವಾ ಕಿತ್ತು

ಜನಪದ


ಅತ್ತಿಯಮರವಾ ಕಿತ್ತು ನೆಡುವಾರುಂಟೆ
ಅತ್ತಿಲ್ಲದ ಮನೆಗೆ ಗೌರಿಯ
ಅತ್ತಿಲ್ಲದ ಮನೆಗೆ ಗೌರಿಯ ಕೊಟ್ಟರೆ
ಒಪ್ಪವಿನ್ಯಾರೆ ಕಲಿಸೋರು||

ಆತ್ತೆಯು ನಾನೆ ಅತ್ತಿಗೆಯು ನಾನೇ
ಮತ್ತೆ ಸೋದರಿ ಗೌರಿಗೆ
ಮತ್ತೆ ಸೋದರಿ ಗೌರಿಗು ನಾನೆ
ಗೌರಿಯ ನಮಗೆ ಕೊಡಬೇಕು||

ಆಲದ ಮರವನ್ನೆ ಸೀಳಿ ನೋಡುವರುಂಟೆ
ಮಾವಿಲ್ಲದ ಮನೆಗೆ ಗೌರಿಯ
ಮಾವಿಲ್ಲದ ಮನೆಗೆ ಗೌರಿಯ ಕೊಟ್ಟರೆ
ಆಯವಿನ್ಯಾರೆ ಕಲಿಸೋರು||

ಮಾವನು ನಾನೆ ಭಾವನು ನಾನೆ
ಮತ್ತೆ ಸೋದರಿ ಗೌರಿಗೆ
ಮತ್ತೆ ಸೋದರಿ ಗೌರಿಗು ನಾನೆ
ಗೌರಿಯ ನಮಗೆ ಕೊಡಬೇಕು||

ಆರು ವರುಷದ ಬಾಲೆ ನಮಗೌರಿ ಈಗಿನ್ನು
ಹರಿವಾಣ ಬೆಳಗೋದ್ ಅರಿಯಳು
ಹರಿವಾಣ ಬೆಳಗೋದ್ ಅರಿಯಳು ನಮ ಗೌರಿ
ನಾವ್ಹ್ಯಾಂಗೆ ಗೌರಿಯ ಕಲಿಸೋದು||

ಹರಿವಾಣ ಬೆಳಗೋದ್ ಅರಿಯದಿದ್ದೊಡೆ ನಾಳೆ
ನಾನೇ ಕಲಿಸೂವೆ ಗೌರಿಗೆ
ನಾನೇ ಕಲಿಸೂವೆ ಗೌರಿಗೆ ನಾಳೆ
ಗೌರಿಯ ನಮಗೆ ಕೊಡಬೇಕು||

ಹಾದೀಲಿ ಟಿರುಗೋರು ಬೀದೀಲಿ ಉಂಬೋರು
ತ್ಯಾಗಾದೆಲೆಯಂಗೆ ಉಡಿತುಂಬುವರು
ತ್ಯಾಗಾದೆಲೆಯಂಗೆ ಉಡಿತುಂಬೊ ಜಂಗಮಗೆ
ಗೌರಿಯಾ ನಾವು ಕೊಡುವೆವು||

ಆಕಾಶದಿಂಬಕ್ಕೆ ಭೂಮಿಯ ಭಾರಕ್ಕೆ
ಹಾಕ್ಯಾರೆ ಮುತ್ತಿನ ಚಪ್ಪರವಾ
ಮಾಡ್ಯಾರೆ ಗೌರಿಯ ಮದುವೆಯ ಸಂಭ್ರಮದಿ
ಕಳುಹಾರೆ ಗೌರಿಯ ಸಡಗರದಿ||
logoblog

Thanks for reading ಅತ್ತಿಯಮರವಾ ಕಿತ್ತು

Previous
« Prev Post

No comments:

Post a Comment

Note: Only a member of this blog may post a comment.