ಸೋದರ ಮಾವ ನನ ಯಾಕ ಕಾಡತಿ
ಜನಪದ
(೦+-)
ಸೋದರ ಮಾವ ನನ ಯಾಕ ಕಾಡತಿ
ಹಿತ್ತಲದಾಗ ಯಾಕ ಕದ್ದು ನಿಲ್ಲತಿ
ನೀ ಕದ್ದು ನಿಲ್ಲತಿ
(೦->)
ಹೇ! ಮಾವನ ಮಗಳೇ ನೀ ಹಿಂಗ ಯಾಕ ಮಾಡತಿ
ಬಯಸಿ ಬಂದೇನಿ ನಾ ಹಿಂಗ ಯಾಕ ದೂಡತಿ
ನನ್ನ ಯಾಕ ದೂಡತಿ
(೦+-)
ನಮ್ಮ ಮದುವಿ ಆಗೊ ದಿವಸ ಇನ್ನು ದೂರವೇನು ಇಲ್ಲ
ನನ್ನ ಜೋಡಿ ಆಗೊ ಮನಸು ನನಸಾಗತೈತಿ ಎಲ್ಲ
ಮಾವ ಮಾವ ಈಗ ಹೋಗು ಅವ್ವ ನೋಡಿದರ ಏನ್ ಗತಿ
|| ಸೋದರ ||
(೦->)
ಮದುವಿ ಆಗೊದಂತು ಗ್ಯಾರೆಂಟಿ ಐತಿ
ನಿನ್ನ ಗಂಡ ನಾನು ಇನ್ಯಾರ ಅಂಜಿಕಿ
ನಮಗ ಇನ್ಯಾರ ಅಂಜಿಕಿ
(೦+-)
ಅಯ್ಯೋ ಮದುವಿಗೆ ಮುಂಚೆ ಇದೇನು ಚಟ ಹಾರಿ ಬಂದಿ ಬೇಲಿಯ ಗೂಟ
(೦->)
ಕನಸಮನಸಿನ್ಯಾಗ ಬಲು ಕಾಟಾ ಮಾಡಬೇಕು ನಾನೀಗ್ ಊಟ
(೦+-)
ಕೊಳ್ಳಿಗೆ ತಾಳಿ ಬಿದ್ದ ಮರುದಿನ ಎಲ್ಲ ನಿಂದೆ ಈಗ್ಯಾಕ ಹಟ
(೦->)
ತಡಿಯಲಾರೆ ನಾ ಅಲ್ಲಿ ಮಟ ಯಾರದೈತಿ ನಮಗ ಕಾಟ
(೦+-)
ಅಂಗೈಯ್ಯಾಗ ಹಣ್ಣಿರುವಾಗ ಹೊಟ್ಟೆ ಹಸಿವ ತಾಳೆನು ನಾನು
(೦->)
ನಾನೇ ನಿನ್ನ ಗಂಡ ನಿನಗ ಯಾತಕ ಹಳವಂಡ
(೦+-)
ಮೈ ಮರೆತು ಕೆಟ್ಟ ಬೀಳ್ಬೇಕು ತುಂಬಿದ್ ಹೊಂಡ
|| ಸೋದರ ||
(೦->)
|| ಮಾವನ || ಹೇಳ!
(೦+-)
ಕಸಗಾಯೊಳಗ ರುಚಿಯಿಲ್ಲ
ಹಣ್ಣಾಗೋತನಕ ಗತಿಯಿಲ್ಲ
(೦->)
ಒತ್ತಿ ಒತ್ತಿ ಹಣ್ಣ ಮಾಡ್ತನಿ
ಅರ್ಜೆಂಟಾಗಿ ತಿನ್ನತನಿ
(೦+-)
ಹೇಯ್! ಮಾಗುವ ತನಕ ಸ್ವಲ್ಪ ತಡಿ
ಬಂದ ದಾರಿಯ ತಿರುಗಿ ಹಿಡಿ
(೦->)
ಅವಸರ ನಾನು ತಡಿಲಾರೆ ಬಾರೆ ಹತ್ತಿರ ನೀ ನೀರೆ
(೦+-)
ಏ! ಆಸೆ ಐತಿ ಭಾಳ ನನ್ನ ಕಾಡ ಬ್ಯಾಡ
ಮದುವೆ ಗಿಂತ ಮುಂಚೆ ಮಾವಿನ ಕಾಯಿ ತಿನಿಸಬ್ಯಾಡ
ತೊಟ್ಲ ಮೊದಲ ಕಟ್ಟಿ ಆಮ್ಯಾಲ ಮೊದಲ ರಾತ್ರಿ ಬ್ಯಾಡ
|| ಸೋದರ ||
|| ಸೋದರ ||
|| ನಮ್ಮ ಮದುವಿ ||
(೦->)
ಚಂದೊಳ್ಳಿ ಹೆಣ್ಣೇ ನೀ ಬುದ್ಧಿ ಕಲಿಸೀದಿ
ದಾರಿ ತಪ್ಪಿದ ನನಗ ಹಾದಿ ಹಿಡಿಸೀದಿ
ನನಗ ಹಾದಿ ಹಿಡಿಸೀದಿ
ಮದುವಿ ಆಗ್ತೀನಿ ನಾನು ಆದಷ್ಟು ಜಲ್ದಿ
ನೋಡ್ಕೊಂತೀನಿ ನಿನ್ನ ಮೊದಲ ರತ್ರೀಲಿ
ನಿನ್ನ ಮೊದಲ ರತ್ರೀಲಿ
No comments:
Post a Comment
Note: Only a member of this blog may post a comment.