ಚಿತ್ರ: ಮುಂಗಾರು ಮಳೆ
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಪೂಜಾ ಗಾಂಧಿ
ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು
ಮಾಯದ ಲೋಕದಿಂದ ನನಗಾಗಿ ಬಂದವಳೆಂದು
ಆಹಾ ಎಂತ ಮಧುರ ಯಾತನೆ
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ
ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
ಇನ್ಯಾರ ಕನಸಲು ನೀನು ಹೋದರೆ ತಳಮಳ
ಪೂರ್ಣ ಚಂದಿರ ರಾಜ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ
ನಾ ಕೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ ಸುಮ್ಮನೆ
ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ
No comments:
Post a Comment
Note: Only a member of this blog may post a comment.