ಚಿತ್ರ: ಸಂಗಮ
ಹಾಡಿದವರು: ಸಾಗರ್, ದಿವ್ಯ
ನಟರು: ಗಣೇಶ್, ವೇದಿಕಾ
ಕಾದು ಕಾದು ನಾ ಕುಳಿತಿರುವೆ
ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಹುಡುಗ ಬಾರೋ ಬೇಗ ನೀನು
ಹೃದಯ ಕೂಗಿ ಕರೆಯುತಿದೆ
ಹುಡುಗಿ ಮೋಡಿ ಮಾಡಿ ನೀನು
ಮನಸು ತೇಲಿದೆ
ಎಲ್ಲೋ ಇಟ್ಟು ಕಳೆದಿರೋ ಓಲೆ
ಏನೋ ಗೀಚಿ ಹರಿದಿರೋ ಹಾಳೆ
ಎಲ್ಲದಕ್ಕೂ ನೀನೆ ಕಾರಣ
ಮನಸು ಕೆಡಿಸಿದವನೇ
ಏನೋ ಮಾಡೋ ನೆಪದಲಿ ನೀನು
ನನ್ನೇ ನೋಡೋ ಗಳಿಗೆಗೆ ನಾನು
ಯಾಕೆ ಹೀಗೆ ಕಾದು ಕೂರುವೆ
ತಿಳಿಸು ನನಗೆ ನೀನೆ
ಕಣ್ಣಿಂದ ಒಂದು ಕಣ್ಣೀರ ಬಿಂದು ಖುಷಿಯಲ್ಲಿ ಜಾರಿದೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಒಂಟಿಯಾಗಿ ಕುಳಿತರು ಹೀಗೆ
ಅಂಟಿ ನಿಂಗೆ ಕುಳಿತಿರೋ ಹಾಗೆ
ಬೆಚ್ಚನೆಯ ಭಾವ ನನ್ನಲಿ ಬರುತಲಿರುವುದೇಕೋ
ನೆನ್ನೆ ಮೊನ್ನೆ ಎಣಿಸಿರಲಿಲ್ಲ
ಇಂದು ನೀನೆ ಎದೆಯೊಳಗೆಲ್ಲ
ನಿನ್ನ ಬಿಟ್ಟು ಬೇರೆ ಯೋಚನೆ
ನನಗೆ ಬರದು ಏಕೋ
ಕಣ್ಮುಚ್ಚಿಕೊಂಡು ನಿನ್ನನ್ನೇ ಕಂಡು ಮೈಮರೆತು ಹೋದೆನಾ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
No comments:
Post a Comment
Note: Only a member of this blog may post a comment.