ಚಿತ್ರ: ಮುಂಗಾರು ಮಳೆ
ಹಾಡಿದವರು: ಸೋನು ನಿಗಮ್
ನಟರು: ಗಣೇಶ್, ಪೂಜಾ ಗಾಂಧಿ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ
ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ
ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು
ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ
No comments:
Post a Comment
Note: Only a member of this blog may post a comment.