ಚಿತ್ರ: ನೆನಪಿರಲಿ
ಹಾಡಿದವರು: ಸೌಮ್ಯ ರಾವ್, ಅನೂಪ್, ಅನುಪಮ
ನಟರು: ಪ್ರೇಮ್, ವಿದ್ಯಾ, ನವೀನ್ ಕೃಷ್ಣ, ವರ್ಷ
ದ್ರೌಪದಿ ದ್ರೌಪದಿ ಎಂದಿನದೆ ಈ ಕದನ
ಷಟ್ಪದಿ ಚೌಪದಿ ಯಾವುದರಲೀ ಈ ಕವನ
ಮನಸೆ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ
ಆಸೆ ತಿಮಿಂಗಿಲ
ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸು ಇದೆ ಗಾಳಿಯೊಳಗೆ
ಸುಖದ ಬಹುಮಾನ ಓ ಚಿತ್ತ ಕೊಡುವಂತ
ಪಂಚ ಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ
ಮನಸೆ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತ ಮಹಾ ಚಂಚಲ
ಮನ್ಮಥ ಸಮಯ ಸಾಧಕ
ಇಂದು ಗೆಲ್ಲು ಇಂದ್ರಿಯಗಳ
ಕೊಲ್ಲು ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ ಕುಣಿವ ತನುವೊಳಗೆ
ಕಹಿಯ ವಿಷಘಳಿಗೆ ತರುವುದೆಂತೋ
ಕಣ್ಣು ಮುಚ್ಚಿದರು ಕಾಣೋ ಸ್ವರ್ಗವನು
ಸವಿಯೋ ಹೆಣ್ಣೆದೆಯ ಜರಿವುದೆಂತೋ
ದ್ರೌಪದಿ........
ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ
ಮನಸೆ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ
ದ್ರೌಪದಿ.......
No comments:
Post a Comment
Note: Only a member of this blog may post a comment.