ಚಿತ್ರ: ನೆನಪಿರಲಿ
ಹಾಡಿದವರು: ವಿಜಯ್ ಏಸುದಾಸ್
ನಟರು: ಪ್ರೇಮ್, ವರ್ಷ
ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಅದೆಲ್ಲ ನಾ ಕಂಡೆ ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ ಈ ತಾಜಾ ತನುವಿನಲ್ಲಿ
ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಚೆಲುವಿನ ಭಾರಾನೋ ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ ಸೊಂಪಾದ ಪಾದಗಳಲ್ಲಿ
ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ
ಸೊಗ್ಗುಂಟು....ಸಿಗ್ಗುಂಟು
ಸೊಗ್ಗುಂಟು ಸಿಗ್ಗುಂಟು ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ದೊಣುಕುಂಟು
ಈ ತಾಜಾ ತರುಣಿಯಲ್ಲಿ ಈ ನಾರಿ ನಡುವಿನಲ್ಲಿ
ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟ ಅನ್ನತಾಳೆ
ಅಪ್ಪಿಕೊಂಡರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ ತಣಿಯುತಾಳೆ ಮಣಿಯುತಾಳೆ
ಎಲ್ಲಕ್ಕೂ.....ಆಶ್ಚರ್ಯ.....
ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ
ನಾನೊಂದು titanic ಬೋಟಾದೆ ಸುಖದಲ್ಲಿ
ಒಡೆದೋದೆ ಮುಳುಗೋದೆ ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ ಈ ಕನ್ಯಾ ಕಡಲಿನಲ್ಲಿ
ಲ ಲ ಲ ......
No comments:
Post a Comment
Note: Only a member of this blog may post a comment.