Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 20, 2012

ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ

  Sandeep T Gowda       Friday, January 20, 2012
ಚಿತ್ರ: ನೆನಪಿರಲಿ
ಹಾಡಿದವರು: ಎಸ್ ಪಿ ಬಾಲು
ನಟರು: ಪ್ರೇಮ್, ವಿದ್ಯಾ

ಅರೆ ಯಾರ್ರಿ ಹೆದರ್ಕೊಳ್ಳೋರು ಬೆದರ್ಕೊಳ್ಳೋರು
ಪೇಚಾಡೋರು ಪರದಾಡೋರು
ಮರಗಳ್ ಮರೆನಲ್ ಮಾತಾಡೋರು
morning show ನಲ್ ಪಿಸುಗುಟ್ಟೋರು
ಮೈಸೂರಂತ ಜಿಲ್ಲೇಲಿದ್ದು ಕಣ್ಣಿಗ್ ಬೇಕಾದ್ ನೋಟ ಇದ್ದು
ಹಳೆ ರಾಜರು ಅಪ್ಪಣೆ ಇದ್ದು
ಪ್ರೀತಿ ಮಾಡೋಕ್ ಜಾಗ್ಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ರಿ ಬನ್ರಿ ನೋಡ್ರಿ ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ

ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ
ತೇಲ ಕಾರಂಜಿ ಕೆರೆ .....ವಾ ವಾ
ಕೂರಕ್ ಕುಕ್ಕ್ರಳ್ಳಿ ಕೆರೆ ತೇಲ ಕಾರಂಜಿ ಕೆರೆ ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಬಲ್ಮುರಿಲಿ ಪೂಜೆ ನೆಪ....ವಾ ವಾ
ಎಡ್ಮುರಿಲಿ ಜಪ ತಪ.....ವಾ ವಾ
ಬಲ್ಮುರಿಲಿ ಪೂಜೆ ನೆಪ ಎಡ್ಮುರಿಲಿ ಜಪ ತಪ ಲವ್ವಿಗೆ ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್ ಪಟ್ನ ಸೌತಿನಲ್ಲಿ ನಂಜನ್ಗೂಡು ಪೂಜೆಗೆ ಲವ್ ಪೂಜೆಗೆ
ಈ ಭಯ ಬಿಸಾಕಿ......ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬಾಕಿ.....ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ
ಮನಸು ಬಿಚ್ ಕೊಳ್ರಿ ಮರ ಮರ ಮರದ ಮರೇಲಿ
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ
ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ

ಎ ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ

ಕೆ ಆರ್ ಎಸ್ ಲಿ ಕೆಫೆ ಮಾಡಿ ಬ್ಲಫ್ಫಿನಲ್ಲಿ ಬಫೆ ಮಾಡಿ ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್ ಇಲ್ದಿದ್ರೆ ಒಂಟಿ ಕೊಪ್ಪಲ್ ಲವ್ವಿಗೆ ಈ ಲವ್ವಿಗೆ
ಈ ಭಯ.............

ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ
ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮ

ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ
ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು
ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು

ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ ಲವ್ವಿಗೆ ಸ್ವೀಟ್ ಲವ್ವಿಗೆ
ನರಸಿಂಹಸ್ವಾಮಿ ಪದ್ಯ ಇದೆ ಅನಂತ್ ಸ್ವಾಮಿ ವಾದ್ಯ ಇದೆ ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕಿ.........
logoblog

Thanks for reading ಕೂರಕ್ ಕುಕ್ಕ್ರಳ್ಳಿ ಕೆರೆ..... ವಾ ವಾ

Previous
« Prev Post

No comments:

Post a Comment

Note: Only a member of this blog may post a comment.