ಚಿತ್ರ: ಸೈಕೋ
ಹಾಡಿದವರು: ಹರಿಚರಣ್, ಸೈಂಧವಿ
ನಟರು: ಧನುಶ್, ಅನಿತಾ
ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಅಲೆ ಅಲೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ
ಅಪರೂಪ ರೂಪಸಿಯೇ ನಿನಗೆ ಪ್ರಣಾಮ
ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೇ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೊಹಿತನೆ ನಿನಗೆ ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ ಪ್ರಣಾಮ
ಕನಸಲ್ಲೂ ಹುಚ್ಚನಂತೆ ನಿನಗಾಗಿ ಓಡುವೆ
ಮೈಮರೆತು ಸಂತೆಯಲ್ಲೂ ನಿನ್ನನ್ನೇ ಕೂಗುವೆ
ಒರಗಿರಲು ನಿನ್ನ ಮಡಿಲಲಿ
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಝೀಕುವೆ
ನೀನಿರಲು ನನ್ನ ಕತೆಯಲಿ
ನಾನಿರುವೆ ನಿನ್ನ ಜೊತೆಯಲಿ.......
ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ
ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲಿ
ನಾನೆಂದೂ ನೋಡದಂತ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
ನಾನಿರುವೆ ನಿನ್ನ ಬಾಳಲಿ.....
No comments:
Post a Comment
Note: Only a member of this blog may post a comment.