Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 27, 2012

ದೇವನದೆಂತಹ ದೊಡ್ಡಸ್ತಿಕೆ ಬಿಡ

  Sandeep T Gowda       Friday, January 27, 2012
ದೇವನದೆಂತಹ ದೊಡ್ಡಸ್ತಿಕೆ ಬಿಡ
ಜನಪದ

ದೇವನದೆಂತಹ ದೊಡ್ಡಸ್ತಿಕೆ ಬಿಡ
ನನ್ನ ದೊರಿ ಮ್ಯಾಲಾ
ನನ್ನ ಬಿಟ್ಟು ಇನ್ನೊಂದು ಹೆಣ್ಣ
ಮ್ಯಾಲಿಲ್ಲ ಅವಗ ಖ್ಯಾಲಾ ||ಪ||

ರಾಮ ರಾಮನಂತೆ, ಹೊಗಳೆ ಹೊಗಳುತಾರೆ
ರಾಮನೇನು ಶುದ್ಧಾ...
ಯಾರ ಮಾತ ಕೇಳಿ ತನ್ನ ಸತಿಯನೆ
ಅಡವಿಗೆ ಅಟ್ಟಿದ್ದಾ...||ದೇವ||

ಬ್ರಹ್ಮ ದೇವನಂತೆ, ಬಹಳ ಹಿರಿಯನಂತೆ
ಬುದ್ಧಿ ಐತಾ ಅವಗಾ...
ಮೂರು ಜನ ಹೆಂಡಿರ್‍ಯಾತಕೋ
ಪ್ರೀತಿಯ ಬಗಿ ಹ್ಯಾಂಗಾ...||ದೇವ||

ಕೇಳಬ್ಯಾಡ ಶಿವನೇಳಿಗೆ ಗೌರಿಯ
ಗೋಳುಗೊಳಿಸಿಬಿಟ್ಟಾ...
ಹೇಳದೆ ಕೇಳದೆ ತನ್ನ ಜಟೆಯಲಿ
ಗಂಗೆಯ ತಂದಿಟ್ಟ...||ದೇವ||

ಕೃಷ್ಣನದೆಂತಹ ಖೊಟ್ಟಿತನವೋ
ನೋಡೆಷ್ಟು ಹೆಂಡಿರವಗಾ...
ಒಬ್ಬರಿಲ್ಲದಿನ್ನೆಷ್ಟು ಮಂದಿ
ಹಿಡಿದೀತು ಹೃದಯದಾಗಾ...||ದೇವ||
logoblog

Thanks for reading ದೇವನದೆಂತಹ ದೊಡ್ಡಸ್ತಿಕೆ ಬಿಡ

Previous
« Prev Post

No comments:

Post a Comment

Note: Only a member of this blog may post a comment.