Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 27, 2012

ಯವ್ವ ಯವ್ವ ನಾ ಹ್ಯಾಂಗ

  Sandeep T Gowda       Friday, January 27, 2012
ಯವ್ವ ಯವ್ವ ನಾ ಹ್ಯಾಂಗ
ಜನಪದ

ಯವ್ವ ಯವ್ವ ನಾ ಹ್ಯಾಂಗ ಬಾಳುವೆ ಮಾಡಲೇ
ಇಂಥಾ ಗಂಡನ ಕೂಡಿ ನಾ ಹ್ಯಾಂಗ ಬಾಳುವೆ ಬಾಳಲೆ
ನಾ ಹ್ಯಾಂಗಾ ಬಾಳುವೆ ಮಾಡಲೆ ||

ಮೂರು ಮುದ್ದೆ ಉಣ್ಣುತ್ತಾನೆ | ಮೂಲೇಲಿ ಕೂರುತ್ತಾನೆ |
ಮೂರು ಮುದ್ದೆ |ಯವ್ವ| ಮೂರು ಮುದ್ದೆ ಉಣ್ಣುತ್ತಾನೆ
ಮೂಲೇಲಿ ಕೂರುತ್ತಾನೆ |ಊರ್‍ಮುಂದೆ ಹೋಗು ಅಂದ್ರೆ
ಊರ್‍ಗೋಲು ಬೇಡುತಾನೆ ||ಯವ್ವ||

ಆರು ಮುದ್ದೆ ಬೇಡುತಾನೆ | ಅಲ್ಲಲ್ಲಿ ಕೂರುತಾನೆ |
ಆರು ಮುದ್ದೆ |ಯವ್ವ| ಆರು ಮುದ್ದೆ ಬೇಡುತಾನೆ
ಅಲ್ಲಲ್ಲಿ ಕೂರುತಾನೆ | ಆಕಳ್ ಕಟ್ಕೊಂಡ್ ಹೋಗು ಅಂದ್ರೆ
ಗೋಳಾಡ್ಕೊಂಡ್‍ಹೋಗ್ತಾನೆ ||ಯವ್ವ||

ಹಿಟ್ಟನ್ನೆಲ್ಲ ಒಟ್ಟು ಮಾಡಿ ಇಷ್ಟಿಷ್ಟು ನುಂಗುತಾನೆ |
ಹಿಟ್ಟನ್ನೆಲ್ಲ |ಯವ್ವ| ಹಿಟ್ಟನ್ನೆಲ್ಲ ಒಟ್ಟು ಮಾಡಿ
ಇಷ್ಟಿಷ್ಟು ನುಂಗುತಾನೆ | ಕೋಳಿ ಕುಯ್ದೋರ್‍ಮನೇಗೆ
ಕುಣ್ಕೊಂಡ್ ಕುಣ್ಕೊಂಡ್ ಹೋಗುತಾನೆ ||ಯವ್ವ||
logoblog

Thanks for reading ಯವ್ವ ಯವ್ವ ನಾ ಹ್ಯಾಂಗ

Previous
« Prev Post

No comments:

Post a Comment

Note: Only a member of this blog may post a comment.