Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Friday, January 27, 2012

ನಮ್ಮೂರ ಜಾತ್ರೇಗೆ ಬಂದು ಹೋಗಾ..

  Sandeep T Gowda       Friday, January 27, 2012
ನಮ್ಮೂರ ಜಾತ್ರೇಗೆ ಬಂದು ಹೋಗಾ..

ಜನಪದ


ನಮ್ಮೂರ ಜಾತ್ರೇಗೆ ಬಂದು ಹೋಗಾ ಜಾಣ
ಒಂದು ದಿನದ ಮಟ್ಟಿಗ್ ನಿಂದು ಹೋಗ ಬಂದು ಹೋಗಾ

ಜೋಡು ಬಂಡಿಯ ಹೂಡಿ ಗಂಡ ಮಕ್ಕಳ ಕೂಡಿ
ಸುತ್ತೂರ ನೆಂಟರ ಜೊತೆಗೂಡಿ
ಹುಟ್ಟೂರ ಸೇರಿ ಹೆತ್ತವರ ಕಾಣೋ
ಮುತ್ತೈದೆ ಮುಖವ ನೋಡು ಬಾರ

ನಮ್ಮೂರ ಓಹೋ.....ನಮ್ಮೂರ ಜಾತ್ರೇಗೆ

ಅಡ್ಡ ಪಲ್ಲಕ್ಕಿ ಏರಿ ಮನೆಗೆ ಮಡ್ಲಕ್ಕಿ ಕೋರಿ
ಆವಾರ ಸುತ್ತಾಡ್ಯಾಳೆ ಮಹತಾಯಿ
ಮುತ್ತೈದೆಯರು ಬಂದು ಮುತ್ತಿನಾರತಿ ಎತ್ತಿ
ಮಂಗಳಗೀತೆ ಹಾಡಿ ಬೆಳಗ್ಯಾರೆ

ನಮ್ಮೂರ ಆಹಾ.....ನಮ್ಮೂರ ಜಾತ್ರೇಗೆ
logoblog

Thanks for reading ನಮ್ಮೂರ ಜಾತ್ರೇಗೆ ಬಂದು ಹೋಗಾ..

Previous
« Prev Post

No comments:

Post a Comment

Note: Only a member of this blog may post a comment.