ಕಣ್ಣ ನೀರಲಿ (೧೯೮೧) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹೃದಯ ಪುಷ್ಪವೆ ಅರ್ಚಿಸುವೆ ಪ್ರಭುವೆ
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹೃದಯ ಪುಶ್ಪವೆ ಅರ್ಚಿಸುವೆ ಪ್ರಭುವೆ
ಪಾಪದ ಹೊರೆ ಹೊತ್ತು ಬಂದೆ..ನಿನ್ನ ಸನ್ನಿಧಿಗೆ
ಪಾಪದ ಹೊರೆ ಹೊತ್ತು ಬಂದೆ..ನಿನ್ನ ಸನ್ನಿಧಿಗೆ
ಮೊರೆಯ ಕೇಳಿ ಕರುಣೆ ತೋರೊ ಭಾಗ್ಯದ ನಿಧಿಯೆ..ಸೌಭಾಗ್ಯದ ನಿಧಿಯೆ
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹ್ರುದಯ ಪುಶ್ಪವೆ ಅರ್ಛಿಸುವೆ ಪ್ರಭುವೆ
--------------------------೧--------------------------------
ರಾಘವೇಂದ್ರನ ಜ್ಯೋತಿ ಬೆಳಗೆ ಇರುಳು ಕರಗುವುದು
ರಾಘವೇಂದ್ರನು ಒಲಿದ ವೇಳೆ ಮರಣ ಭಯವಿರದು
ರಾಘವೇಂದ್ರನ ಜ್ಯೋತಿ ಬೆಳಗೆ ಇರುಳು ಕರಗುವುದು
ರಾಘವೇಂದ್ರನು ಒಲಿದ ವೇಳೆ ಮರಣ ಭಯವಿರದು
ರಾಘವೇಂದ್ರನ ಪಾದ ಧೂಳಿ ಬಾಳ ಬೆಳಗುವುದು
ರಾಘವೇಂದ್ರನ ಪಾದ ಧೂಳಿ ಬಾಳ ಬೆಳಗುವುದು
ರಾಘವೇಂದ್ರ ಎನುತ ಜೀವ ಮುಕ್ತಿ ಪಡೆಯುವುದು
ರಾಘವೇಂದ್ರ ಎನುತ ಜೀವ ಮುಕ್ತಿ ಪಡೆಯುವುದು...ಜಗವ ಮರೆಯುವುದು
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹೃದಯ ಪುಷ್ಪವೆ ಅರ್ಚಿಸುವೆ ಪ್ರಭುವೆ
---------------------------೨-------------------------------
ನಾನು ಎಂಬ ಸ್ವಾರ್ಥವನ್ನು ತೆಗೆದು ಮನದಿಂದ
ನೀನೆ ಎಲ್ಲ ಎಂಬ ತತ್ವವ ತುಂಬು ಮುದದಿಂದ
ನಿನ್ನ ಕರುಣೆ ಇಲ್ಲದಿರಲು ನಾನು ತೃಣದಂತೆ
ನಿನ್ನ ಕರುಣೆ ಇಲ್ಲದಿರಲು ನಾನು ತೃಣದಂತೆ
ನೀನು ಬೆರೆತ ಹೃದಯಕೆ ಮುಕ್ತಿ ದೊರೆತಂತೆ
ನೀನು ಬೆರೆತ ಹೃದಯಕೆ ಮುಕ್ತಿ ದೊರೆತಂತೆ..ನನಗೆಲ್ಲಿಯ ಚಿಂತೆ
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹೃದಯ ಪುಷ್ಪವೆ ಅರ್ಚಿಸುವೆ ಪ್ರಭುವೆ
ಪಾಪದ ಹೊರೆ ಹೊತ್ತು ಬಂದೆ..ನಿನ್ನ ಸನ್ನಿಧಿಗೆ
ಮೊರೆಯ ಕೇಳಿ ಕರುಣೆ ತೋರೊ ಭಾಗ್ಯದ ನಿಧಿಯೆ..ಸೌಭಾಗ್ಯದ ನಿಧಿಯೆ
ಕಣ್ಣ ನೀರಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿಯೆಂಬ ಹೃದಯ ಪುಷ್ಪವೆ ಅರ್ಚಿಸುವೆ ಪ್ರಭುವೆ
ಗುರುವಿಗೆ ಶರಣಂ..ಸದ್ಗುರುವಿಗೆ ಶರಣಂ
ಗುರುವಿಗೆ ಶರಣಂ..ಸದ್ಗುರುವಿಗೆ ಶರಣಂ
No comments:
Post a Comment
Note: Only a member of this blog may post a comment.