ಹಗಲು ರಾತ್ರಿ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಹಗಲು ರಾತ್ರಿ ಮನಸು ಗುರುವೆ ನಿನ್ನ ಭಜಿಸಿದೆ
ಹಸಿವು ನಿದ್ರೆ ತೊರೆದು ನಿನ್ನ ನಾಮ ಜಪಿಸಿದೆ
ಹಗಲು ರಾತ್ರಿ ಮನಸು ಗುರುವೆ ನಿನ್ನ ಭಜಿಸಿದೆ
ಹಸಿವು ನಿದ್ರೆ ತೊರೆದು ನಿನ್ನ ನಾಮ ಜಪಿಸಿದೆ
ಕಾಮಕ್ರೋಧ ಗೆಲ್ಲಲೆಂದು ಶಕ್ತಿ ಬೇಡಿದೆ...ನಿನ್ನ ಪಾದ ಕಮಲದಲ್ಲಿ ಶಾಂತಿ ಹುಡುಕಿದೆ
ಪೊರೆಯೋ* ಗುರುವೆ..ಭಾಗ್ಯದ ದೊರೆಯೆ...ಗುರುರಾಘವೇಂದ್ರ..ಯೋಗೇಂದ್ರ
----------------------೧-----------------------
ತುಂಗಾ ನದಿಯ ಬಂಡೆಮೇಲೆ ಪಾದುಕೆ ನಾದ
ಅದ ಕೇಳಿದಾಗ ತೇಲಿ ಬಂತು ಭಕ್ತಿ ನಿನಾದ
ತುಂಗಾ ನದಿಯ ಬಂಡೆಮೇಲೆ ಪಾದುಕೆ ನಾದ
ಅದ ಕೇಳಿದಾಗ ತೇಲಿ ಬಂತು ಭಕ್ತಿ ನಿನಾದ
ಮಂತ್ರಾಲಯದ ಮಣ್ಣಿನ ಕಣಕಣವೆಲ್ಲ..ನಿನ್ನ ಪಾದ ಮಹಿಮೆಯ ಕಂಡಿವೆಯಲ್ಲ
ಕರುಣಿಸೊ ಗುರುವೆ ಭಾಗ್ಯದ ಪ್ರಭುವೆ..ಗುರುರಾಘವೇಂದ್ರ..ಯೋಗೇಂದ್ರ
----------------------೨-----------------------
ವಿದ್ಯೆ ಕಾಣದಂತ ಮೂಢ ಜ್ಞಾನವ ಪಡೆದ
ಸತ್ತು ಹೋದ ಕಂದನಂದು ಮತ್ತೆ ಬದುಕಿದ
ಆಂಗ್ಲರ ಅಧಿಕಾರಿಯೇ ನಿನ್ನ ಕಂಡು ಬೆರಗಾದ
ಮಾಂಸ ಮಲ್ಲಿಗೆಯಾಯ್ತು ನಿನ್ನ ದೃಷ್ಟಿ ಇಂದ
ಒಂದೆ ಎರಡೆ ಪವಾಡವು ಗುರುವೆ ನಿನ್ನದು..ಒಂದೆ ಎರಡೆ ಪವಾಡವು ಗುರುವೆ ನಿನ್ನದು
ನಿನ್ನ ಸೇವೆ ಮಾಡಿ ನಲೆವ ಪುಣ್ಯ ನನ್ನದು
ಮಹಿಮೇಯು ನಿನದೆ..ಆ ಹಿರಿಮೆಯು ನಿನದೆ...ಗುರುರಾಘವೇಂದ್ರ..ಯೋಗೇಂದ್ರ
ರಾಘವೇಂದ್ರ..ಗುರುರಾಘವೇಂದ್ರ
ರಾಘವೇಂದ್ರ..ಗುರುರಾಘವೇಂದ್ರ..ಗುರುರಾಘವೇಂದ್ರ..ಗುರುರಾಘವೇಂದ್ರ
No comments:
Post a Comment
Note: Only a member of this blog may post a comment.