Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಸವಾರಿ... ಮರಳಿ ಮರೆಯಾಗಿ

  Sandeep T Gowda       Tuesday, January 17, 2012
| ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ೨೦೦೮

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸತಾದ ಹರುಷ ಹರವೂ ಹಸಿ ಖುಷಿ ಕವನ
ಕನಸಲಿ ನನ್ನ ಸಾಗಿಸಿ… ಕಲರವ ನೀ ಪಸರಿಸಿ…ನೀ ಇನಿಯನೀ ಪ್ರೀತಿಗೆ ಸಾರಥಿ...

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…

ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೀ…ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ…

ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೀ… ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ
logoblog

Thanks for reading ಸವಾರಿ... ಮರಳಿ ಮರೆಯಾಗಿ

Previous
« Prev Post

No comments:

Post a Comment

Note: Only a member of this blog may post a comment.