ಎಸ್. ನಾರಾಯಣ್ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಸೇವಂತಿ ಸೇವಂತಿ | ೨೦೦೬
ಸಂಗೀತ: ಎಸ್ ಏ ರಾಜ್ಕುಮಾರ್
ಗಂಡು:
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ..
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ..
ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ..
ಹಳ್ಳದ ನೀರು ತರುತಾಳೆ ನನ ಗೆಳತೀ..
ಬಣ್ಣದ ಬಾಲೆ ನೀ ಹೇಳೇ..
ಎನ್ನ ಮ್ಯಾಲ ಮುನಿವಾರೇ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕೋಗಿಲೆ ದನಿ ಚೆಂದ
ನಾಗರ ಹೆಡೆ ಚೆಂದ
ದೇವಲೋಕದ ಪದುಮಿನಿ ನೀನೂ..
ಹೆಣ್ಣು:
ಮುಂಚಿಲ್ಲ ನನ್ನ ಗೆಳೆಯ
ಕನಸಲ್ಲ ನಂಬು ನನ್ನ
ಚೆನ್ನಾದ ಚೆಲುವ ನೀ ಕೇಳು..
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ
ಬರ್ತೀನಿ ನೀನಿಟ್ಟ ಗುರುತೀಗೆ
ಬರ್ತೀನಿ ಜಾಣ.. ಬರುವಾ ದಾರಿ ಕಾಯೊ
ಎನ್ನ ಮ್ಯಾಲ ಮುನಿವಾರೆ..
ಗಂಡು:
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ..
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ..
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ..
No comments:
Post a Comment
Note: Only a member of this blog may post a comment.