Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಮೈಸೂರ ಮಲ್ಲಿಗೆ(1992) - ಸಿರಿಗೆರೆಯ ನೀರಲ್ಲಿ

  Sandeep T Gowda       Tuesday, January 17, 2012
ಕೆ.ಎಸ್. ನರಸಿಂಹಸ್ವಾಮಿ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ಮೈಸೂರ ಮಲ್ಲಿಗೆ | ಮೈಸೂರು ಮಲ್ಲಿಗೆ | ೧೯೯೨
ಚಿತ್ರ: ಮೈಸೂರ ಮಲ್ಲಿಗೆ(೧೯೯೨)
ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಸಂಗೀತ: ಸಿ. ಅಶ್ವಥ್
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು
ನಿನ್ನ ಹೆಸರು…

ಜೋಯಿಸರಾ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು
ನಿನ್ನ ಹೆಸರು…

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು
ಒಂದಾಳೆ ಹೂವಲ್ಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು
ಉಯ್ಯಾಲೆ ನಿನ್ನಾ ಹೆಸರು…

ಮರೆತ ತುಟಿಗೆ ಬಾರದೆ ಮೋಡಮರೆಯೊಳಗೆ ಬೆಳದಿಂಗಳೊ ನಿನ್ನ ಹೆಸರು
ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು
ನಿನ್ನ ಹೆಸರು… ನಿನ್ನ ಹೆಸರು
ನಿನ್ನ ಹೆಸರು… ನಿನ್ನ ಹೆಸರು
logoblog

Thanks for reading ಮೈಸೂರ ಮಲ್ಲಿಗೆ(1992) - ಸಿರಿಗೆರೆಯ ನೀರಲ್ಲಿ

Previous
« Prev Post

No comments:

Post a Comment

Note: Only a member of this blog may post a comment.