Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಆಂಜನೇಯನ ಮನದಲಿ

  Sandeep T Gowda       Wednesday, January 25, 2012
ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಆಂಜನೇಯನ ಮನದಲಿ
ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೨ | ಎಲ್ಲಿ ಹನುಮನೋ ಅಲ್ಲಿ ರಾಮನು
ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ.ರಾಜ್‍ಕುಮಾರ್

ಆಂಜನೇಯನ ಮನದಲಿ ನೆನೆದರೆ ಸಾಲದೆ
ಅವನಿಂದಾಗದ ಕಾರ್ಯ ಜಗದಲಿ ಏನಿದೆ
ಆ ಸುಂದರ ಮೂರುತಿ ಮನದಲಿ ನಿಂತರೆ ಸಾಲದೆ
ಮಾರುತಿ ರಾಯನು ಒಲಿದರೆ ಚಿಂತೆಯು ಏನಿದೆ

ರಾಮಚಂದ್ರನ ದುಃಖವ ಕಳೆವನಲ್ಲವೆ
ನಿನ್ನ ದುಃಖವ ಕಳೆವುದು ಅವನಿಗಸಾಧ್ಯವೆ
ದುಷ್ಟರಕ್ಕಸರ ನಾಶ ಮಾಡಿದವನಲ್ಲವೆ
ನಿನ್ನ ದುಷ್ಠಗುಣಗಳ ಅಳಿಸಲು ಅವನಿಗಸಾಧ್ಯವೆ

ಸಾಗರವನ್ನೆ ದಾಟಿದ ಸಾಹಸಿಯಲ್ಲವೆ
ಸಂಸಾರ ಸಾಗರವ ದಾಟಿಸಲವನಿಗಸಾಧ್ಯವೆ
ಹನುಮನ ಹೃದಯವೆ ರಾಮನ ಮಂದಿರವಲ್ಲವೆ
ಆ ಮಾರುತಿ ಒಲಿದರೆ ರಾಮನು ನಿನ್ನವನಲ್ಲವೆ
logoblog

Thanks for reading ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಆಂಜನೇಯನ ಮನದಲಿ

Previous
« Prev Post

No comments:

Post a Comment

Note: Only a member of this blog may post a comment.