Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಮಾರುತಿ..ಸೇವಕನ ಮಾಡು

  Sandeep T Gowda       Wednesday, January 25, 2012
ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಮಾರುತಿ..ಸೇವಕನ ಮಾಡು
ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೨ | ಎಲ್ಲಿ ಹನುಮನೋ ಅಲ್ಲಿ ರಾಮನು
ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ.ರಾಜ್‍ಕುಮಾರ್

ಮಾರುತಿ..
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು

ನಿನ್ನಂತೆ ನನ್ನ ಸೇವಕನ ಮಾಡು
ರಾಮಚಂದ್ರನ ಸೇವಿಸಿ ಪೂಜಿಸಿ
ರಾಮಚಂದ್ರನ ಸೇವಿಸಿ ಪೂಜಿಸಿ
ಧನ್ಯನಾಗುವಂತೆ ಹರಸಿ ನನ್ನ
ಧನ್ಯನಾಗುವಂತೆ ಹರಸಿ ನನ್ನ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲ
ಸೇವೆಯು ನೀಡುವ ಮಹದಾನಂದ ಬಣ್ಣಿಸೆ ಮಾತುಗಳಿಲ್ಲ
ಸೇವೆಯು ಕೊಡುವ ಫಲದ ಕಲ್ಪನೆ
ಸೇವೆಯು ಕೊಡುವ ಫಲದ ಕಲ್ಪನೆ ಕಲ್ಪವೃಕ್ಷಕು ಇಲ್ಲ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನೆಂದೇ ನಂದಿಗೆ ದೊರಕಿತು ಕೈಲಾಸದಲಿ ಸ್ಥಾನ
ಸೇವಕನಾಗೇ ಗರುಡನು ಪಡೆದ ವೈಕುಂಠದಲಿ ತಾಣ
ಸೇವಕನಾದರೆ ನನ್ನಲಿ ಆಗ
ಸೇವಕನಾದರೆ ನನ್ನಲಿ ಆಗ ಕರಗುವುದು ಅಜ್ಞಾನ
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...

ಸೇವಕನಾಗೇ ಎಲ್ಲ ಶಕ್ತಿಯು ನಿನ್ನ ಕೈಸೇರಿತು ಹನುಮ
ಪೂಜೆಯು ಹೊಂದುವ ಭಾಗ್ಯ ನೀಡಿತು ನಿನಗಾ ರಾಮನಾಮ
ನನ್ನೀ ಜನುಮವು ಸಾರ್ಥಕ ತಂದೆ
ಪಡೆದರೆ ನಿನ್ನಾ ಪ್ರೇಮಾ.
ಸೇವಕನ ಮಾಡು ಸೇವಕನ ಮಾಡು
ನಿನ್ನಂತೆ ನನ್ನ ಸೇವಕನ ಮಾಡು
ಮಾರುತಿ...ಸೇವಕನ ಮಾಡು
ಮಾರುತಿ...
logoblog

Thanks for reading ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಮಾರುತಿ..ಸೇವಕನ ಮಾಡು

Previous
« Prev Post

No comments:

Post a Comment

Note: Only a member of this blog may post a comment.