Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಎತ್ತಲೋ ಮಾಯವಾದ

  Sandeep T Gowda       Wednesday, January 25, 2012
ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಎತ್ತಲೋ ಮಾಯವಾದ
ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೨ | ಎಲ್ಲಿ ಹನುಮನೋ ಅಲ್ಲಿ ರಾಮನು
ಧ್ವನಿಮುದ್ರಿಕೆ: ಎಲ್ಲಿ ಹನುಮನೋ ಅಲ್ಲಿ ರಾಮನು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ.ರಾಜ್‍ಕುಮಾರ್

ಎತ್ತಲೋ ಮಾಯವಾದ..
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ
ಅಕ್ಕ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ
ನಗೆಯ ತಂದೆಯ ಮಹನೀಯ..
ಆ.. ಮಾರುತಿ ರಾಯ
ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿ ತಂದೆ ಎಲ್ಲಿಂದ ರಾಯ ಮುತ್ತೆತ್ತ ರಾಯ

ಸೀತಮ್ಮ ಸ್ನಾನ ಮಾಡಿ ಮೂಗುತಿಯ ಹುಡುಕಾಡಿ
ನಿನ್ನ ಕೂಗಿದಳೇನು ಹನುಮಂತ ರಾಯ
ನೀರಲ್ಲಿ ಬಾಲಬಿಟ್ಟು ನದಿಯನ್ಣೇ ಶೋಧಿಸಿದೆ
ಎಂಥ ಶ್ರದ್ಧೆಯೋ ಮಹನೀಯ..
ಆ.. ಹನುಮಂತ ರಾಯ

ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ
ಮುತ್ತೆತ್ತ ರಾಯನೆಂದು ಹರಸಿದಳೇನು
ನಿನ್ನಂಥ ದಾಸನನು ಪಡೆಯ ಆ ರಾಮನು
ಎಂಧ ಭಾಗ್ಯವಂತನಯ್ಯ..
ಆ.. ಮಾರುತಿ ರಾಯ

ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ
ಏನೂ ಇಲ್ಲದ ಜೀವ ನನ್ನದು ಸ್ವಾಮಿ
ನಿನ್ನೇ ನಾ ನಂಬಿ ಬಂದೆ
ನೀನೇ ನನ್ನ ತಾಯಿ ತಂದೆ
ಕಾಪಾಡುವ ಹೊಣೆಯು ನಿನ್ನದು..
ತಂದೆ ನಿನ್ನದು
logoblog

Thanks for reading ಎಲ್ಲಿ ಹನುಮನೋ ಅಲ್ಲಿ ರಾಮನು (1982) - ಎತ್ತಲೋ ಮಾಯವಾದ

Previous
« Prev Post

No comments:

Post a Comment

Note: Only a member of this blog may post a comment.