Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ನನ್ನವರಾರು ನನಗಿಲ್ಲ (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ನನ್ನವರಾರು ನನಗಿಲ್ಲ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ

ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ

ನನ್ನವರಾರು ನನಗಿಲ್ಲ

---------------------೧----------------------

ಹೊಸ ಹೊಸ ಆಸೆಯು ದಿನವೆಲ್ಲ..ಈ ಮನವನು ಹಿಂಡಿದೆ ಸುಖವಿಲ್ಲ
ಹೊಸ ಹೊಸ ಆಸೆಯು ದಿನವೆಲ್ಲ..ಈ ಮನವನು ಹಿಂಡಿದೆ ಸುಖವಿಲ್ಲ

ಮೂಡುವ ಬಯಕೆಗೆ ಕೊನೆಯಿಲ್ಲ..ಮೂಡುವ ಬಯಕೆಗೆ ಕೊನೆಯಿಲ್ಲ
ಅದು ಮುಗಿಯದೆ ಶಾಂತಿಯು ನನಗಿಲ್ಲ

ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ

ನನ್ನವರಾರು ನನಗಿಲ್ಲ

----------------------೨----------------------

ಕತ್ತಲೆ ತುಂಬಿದೆ ಇಲ್ಲೆಲ್ಲ..ನೀ ಬೆಳಕನು ತೋರದೆ ಬದುಕಿಲ್ಲ
ಕತ್ತಲೆ ತುಂಬಿದೆ ಇಲ್ಲೆಲ್ಲ..ನೀ ಬೆಳಕನು ತೋರದೆ ಬದುಕಿಲ್ಲ

ಕಂಬನಿ ಮಿಡಿದರು ಯಾರಿಲ್ಲ..ಕಂಬನಿ ಮಿಡಿದರು ಯಾರಿಲ್ಲ
ನಿನ್ನ ಬೆಂಬಲವಿಲ್ಲದೆ ಸುಖವಿಲ್ಲ

ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ

ನನ್ನವರಾರು ನನಗಿಲ್ಲ

----------------------೩------------------------

ನೊಂದೆನು ನಾನು ಬಾಳೆಲ್ಲ..ಈ ಕಂದನ ನೆನಪು ಏಕಿಲ್ಲ
ನೊಂದೆನು ನಾನು ಬಾಳೆಲ್ಲ..ಈ ಕಂದನ ನೆನಪು ಏಕಿಲ್ಲ

ನೆಮ್ಮದಿಯೊಂದನೆ ಬೇಡುವೆನು..ನೆಮ್ಮದಿಯೊಂದನೆ ಬೇಡುವೆನು
ನೀ ನೀಡದೆ ಹೋದರೆ ನಾನಿಲ್ಲ

ನನ್ನವರಾರು ನನಗಿಲ್ಲ..ನೀನಲ್ಲದೆ ಬೇರೆ ಗತಿ ಇಲ್ಲ
ನನ್ನಲಿ ಏಕೆ ಕೃಪೆ ಇಲ್ಲ..ಗುರುರಾಯನೆ ನೀನೆ ನನಗೆಲ್ಲ

ಗುರುರಾಯನೆ ನೀನೆ ನನಗೆಲ್ಲ..ಗುರುರಾಯನೆ ನೀನೆ ನನಗೆಲ್ಲ
logoblog

Thanks for reading ನನ್ನವರಾರು ನನಗಿಲ್ಲ (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.