ನೀ ತಂದೆ ನಾ ಕಂದ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ
ಬೇರೇನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು
ನೀ ತಂದೆ ನಾ ಬಂದೆ..ನಡೆಸಿದಂತೆ ನಡೆದೆ
ಕಲಿಸಿದ ಮಾತು ಕಲಿತೆ..ಗುರುರಾಯ ಇನ್ನೇಕೆ ನನಗೆ ಚಿಂತೆ
ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ
ಬೇರೇನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು
-------------------------೧--------------------------
ಎಡವಿದರು ನೀನಿರುವೆ ತೊದಲಿದರು ನೀನಿರುವೆ
ಎಡವಿದರು ನೀನಿರುವೆ ತೊದಲಿದರು ನೀನಿರುವೆ
ನಿನ್ನದೆ ಎಲ್ಲ ಎನುವೆ..ಗುರುರಾಯ ನನ್ನದೇನಿಲ್ಲ ಎನುವೆ
ಎಡವಿದರು ನೀನಿರುವೆ ತೊದಲಿದರು ನೀನಿರುವೆ
ನಿನ್ನದೆ ಎಲ್ಲ ಎನುವೆ..ಗುರುರಾಯ ನನ್ನದೇನಿಲ್ಲ ಎನುವೆ
ನಗಿಸಿದರೆ ನಾ ನಗುವೆ..ಅಳಿಸಿದರೆ ನಾ ಅಳುವೆ
ಕಾರಣ ನಾ ಕೇಳೆನು..ಗುರುರಾಯ ಬಲ್ಲೆ ನೀನೆಲ್ಲವನ್ನು..ಗುರುರಾಯ ಬಲ್ಲೆ ನೀನೆಲ್ಲವನ್ನು
ನೋವಿನಲೆ ಮುಳುಗಿರಲಿ ಕಣ್ಣೀರು ಕರೆತಿರಿಲಿ
ಕಾಪಾಡು ಬಾ ಎನ್ನೆನು ಕಂದನ ತಂದೆಯು ಮರೆವನೇನು
ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ
ಬೇರೆನು ನಾ ಅರಿಯೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು
--------------------------೨---------------------
ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ
ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ
ಗುರುರಾಘವೇಂದ್ರ ಎನುವೆ..ಆ ಕ್ಷಣವೆ ಆನಂದವಾ ಹೊಂದುವೆ
ಬಿಸಿಲಲ್ಲಿ ನೆರಳಲ್ಲಿ ಹಗಲಲ್ಲಿ ಇರುಳಲ್ಲಿ
ಗುರುರಾಘವೇಂದ್ರ ಎನುವೆ..ಆ ಕ್ಷಣವೆ ಆನಂದವಾ ಹೊಂದುವೆ
ಎಲ್ಲಿರಲಿ ಹೇಗಿರಲಿ ದೂರದಲೆ ನಾನಿರಲಿ
ಭಯವನ್ನೆ ನಾ ಕಾಣೆನು..ಗುರುರಾಯ ರಕ್ಷಣೆಗೆ ಇರಲು ನೀನು..ಗುರುರಾಯ ರಕ್ಷಣೆಗೆ ಇರಲು ನೀನು
--------------------------೩------------------------
ನೀ ಬಂದು ನಿಂತರು ವರವ ಕೇಳೆಂದರು
ನೀ ಬಂದು ನಿಂತರು ವರವ ಕೇಳೆಂದರು
ಎನೊಂದನು ಬೇಡೆನು..ಗುರುರಾಯ ಕೊಡುವೆ ನೀನೆಲ್ಲವನ್ನು
ನೀ ಬಂದು ನಿಂತರು ವರವ ಕೇಳೆಂದರು
ಎನೊಂದನು ಬೇಡೆನು..ಗುರುರಾಯ ಕೊಡುವೆ ನೀನೆಲ್ಲವನ್ನು
ಹೂವಿನ ಹೃದಯದಲಿ ಪರಿಮಳವು ಬೆರೆತಂತೆ
ನನ್ನೆದೆಯ ಗುಡಿಯಲ್ಲಿಯೆ ನೀನಿರಲು ಚಿಂತೆಯ ಮಾತೆಲ್ಲಿದೆ..ಗುರುರಾಯ ಚಿಂತೆಯ ಮಾತೆಲ್ಲಿದೆ
ನೀ ತಂದೆ ನಾ ಕಂದ..ಇದು ನಮ್ಮ ಅನುಬಂಧ
ಬೇರೆನು ಅರಿವೇನು..ನಿನ್ನಾಣೆ ನಿಜವನ್ನೆ ನಾ ನುಡಿವೆನು
ನಿನ್ನಾಣೆ ಏನೊಂದ ನಾನಿರಿವೆನು..ನಿನ್ನಾಣೆ ನಿಜವನ್ನೆ ನಾ ನುಡಿವೆನು
No comments:
Post a Comment
Note: Only a member of this blog may post a comment.