ನೀನಿರುವ ತನಕ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ನೀನಿರುವ ತನಕ ನಾನಿರಲೆ ಬೇಕು..ಗುರುವೆ...
ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು
ನೀನಿರುವ ತನಕ ನಾನಿರಲೆ ಬೇಕು
ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು
---------------------------೧----------------------------
ನಿನ್ನ ರೂಪವು ಕಣ್ಣ ತುಂಬಿದರೆ ಸಾಕು...
ನಿನ್ನ ರೂಪವು ಕಣ್ಣ ತುಂಬಿದರೆ ಸಾಕು
ನಿನ್ನ ನುಡಿಗಳು ಕಿವಿಯ ಸೋಕಿದರೆ ಸಾಕು
ನಿನ್ನ ಮಹಿಮೆಯ ಮನವು ಅರಿತರೆ ಸಾಕು
ನಿನ್ನ ದಾರಿಯಲೆನ್ನ ನಡೆಸಿದರೆ ಸಾಕು
ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು
---------------------------೨-----------------------------
ನಿನ್ನ ಎದುರಲಿ ನನ್ನ ಇರಿಸಿದರೆ ಸಾಕು
ನಿನ್ನ ತತ್ವವ ದಿನವು ತಿಳಿಸಿದರೆ ಸಾಕು
ನಿನ್ನ ಪ್ರೇಮಾಮೃತವ ಕುಡಿಸಿದರೆ ಸಾಕು
ನಿನ್ನ ಅರಿಯುವ ಶಕ್ತಿ ನೀಡಿದರೆ ಸಾಕು
ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು
---------------------------೩-----------------------------
ಪಯಣದಲಿ ಜೊತೆಯಿರಲು ಕೂಗಿದರೆ ಸಾಕು...
ಪಯಣದಲಿ ಜೊತೆಯಿರಲು ಕೂಗಿದರೆ ಸಾಕು
ಸನಿಹದಲಿ ನೆರಳಂತೆ ನದೆಸಿದರು ಸಾಕು
ಪಾದ ಸೇವೆಯ ಭಾಗ್ಯ ದೊರೆತರೆ ಸಾಕು
ರಾಮ ಹನುಮರ ಸ್ನೇಹ ಅರಳಿದರೆ ಸಾಕು
ಅದಕಿಂತ ಸೌಭಾಗ್ಯ ಇನ್ನೇನು ಬೇಕು..ಅದಕಿಂತ ಸೌಭಾಗ್ಯ ಇನ್ನೇನು ಬೇಕು
ನೀನಿರುವ ತನಕ ನಾನಿರಲೆ ಬೇಕು..ಗುರುವೆ...ಗುರುವೆ...ಗುರುವೆ
No comments:
Post a Comment
Note: Only a member of this blog may post a comment.