Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಒಮ್ಮೆ ನಿನ್ನ ವೀಣೆಯನ್ನು (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ಒಮ್ಮೆ ನಿನ್ನ ವೀಣೆಯನ್ನು (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ

ತಾಳಲಾರೆ ರಾಘವೇಂದ್ರ ಕೇಳುವಾಸೆಯ
ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ

------------------೧--------------------
ಗಾನ ಲಹರಿ ಜಗವನೆಲ್ಲ....
ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ
ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ
ನಾನು ಎಂಬ ಭಾವವಿಂದೆ ಕರಗಿ ಹೋಗಲಿ
ನೀನೇ ತನುವ ಮನವ ತುಂಬಿ ಬಾಳ ಬೆಳಗಲಿ

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ

-----------------೨---------------------

ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ
ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ

ನಾದಗಂಗೆಯಲ್ಲಿ..ಜೀವ ರಾಶಿ ಮುಳುಗಲಿ
ಶಾರದೆಯೇ ಮೈ ಮರೆತು ತಲೆಯ ದೂಗಲಿ
ಶಾರದೆಯೇ ಮೈ ಮರೆತು ತಲೆಯ ದೂಗಲಿ

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ

ತಾಳಲಾರೆ ರಾಘವೇಂದ್ರ ಕೇಳುವಾಸೆಯ
ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
logoblog

Thanks for reading ಒಮ್ಮೆ ನಿನ್ನ ವೀಣೆಯನ್ನು (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.