ಯಾವ ದುಂಬಿಗೆ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
ಯಾರು ಅರಿಯರು ಯಾವ ಹೂವು ಬೆರೆವುದೊ ನಿನ್ನ ಚರಣವ
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
--------------------೧--------------------
ಯಾರ ಕೊರಳಲಿ ಯಾವ ಇಂಪನು..ಗುರುವೆ ನೀನಿರಿಸಿರುವೆಯೊ
ಯಾರ ಕೊರಳಲಿ ಯಾವ ಇಂಪನು..ಗುರುವೆ ನೀನಿರಿಸಿರುವೆಯೊ
ಯಾರ ಮನದಲಿ ಯಾವ ಗುಣವನು ತಂದೆ ನೀ ಬೆರೆಸಿರುವೆಯೊ
ಯಾರ ಬಾಳಲಿ ಕರುಣೆಯಿಂದ ನೆಮ್ಮದಿಯ ತುಂಬಿರುವೆಯೊ..ನೆಮ್ಮದಿಯ ತುಂಬಿರುವೆಯೊ
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
-------------------೨----------------------
ಯಾರು ಬಲ್ಲರು ಯಾರ ಪ್ರೇಮಕೆ ಸೋತು ನೀನು ಒಲುವೆಯೊ
ಯಾರು ಅರಿಯರು ಯಾರ ಕೂಗಿಗೆ ನೀನು ಧಾವಿಸಿ ಬರುವೆಯೊ
ಯಾರ ಹೃದಯದ ಗುಡಿಯಲೆಂದು ಜ್ಯೋತಿ ನೀನಾಗಿರುವೆಯೊ..ಜ್ಯೋತಿ ನೀನಾಗಿರುವೆಯೊ
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
-------------------೩-----------------------
ಕೋಟಿ ಜನುಮವು ಸಾಲದಾಗಿದೆ ಗುರುವೆ ನಿನ್ನ ಅರಿಯಲು
ಕೋಟಿ ಜನುಮವು ಸಾಲದಾಗಿದೆ ಗುರುವೆ ನಿನ್ನ ಅರಿಯಲು
ದಾರಿ ಕಾಣದೆ ರಾಘವೇಂದ್ರನೆ ನಿನ್ನ ನಾನು ಸೇರಲು
ನಿನ್ನ ಕೂಗಿದೆ ಕಣ್ಗಳು..ಬಂದು ನಿಲ್ಲೆಯ ಮನದೊಳು...ಬಂದು ನಿಲ್ಲೆಯ ಮನದೊಳು
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
ಯಾರು ಅರಿಯರು ಯಾವ ಹೂವು ಬೆರೆವುದೊ ನಿನ್ನ ಚರಣವ
ಯಾವ ದುಂಬಿಗೆ ಯಾವ ಹೂವು ಯಾವ ಜಾಣ ಹೇಳುವ
No comments:
Post a Comment
Note: Only a member of this blog may post a comment.