ಏನು ದಾಹ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ....ನಮತಾಮ್ ಕಾಮಧೇನವೆ....
ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ
ತಿಳಿಯದಾಗಿದೆ..ಸ್ವಾಮಿ
ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ
ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ
ತಿಳಿಯದಾಗಿದೆ..ಸ್ವಾಮಿ
ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ
-----------------------೧-------------------------
ಸಾಕು ಎಂಬ ಮಾತು ಮರೆತು..ಮನವು ನಿನ್ನ ಸೇರಿದೆ
ಸಾಕು ಎಂಬ ಮಾತು ಮರೆತು..ಮನವು ನಿನ್ನ ಸೇರಿದೆ
ಚರಣ ಕಮಲ ಸ್ಮರಿಸಿದೆ...ದುಂಬಿಯಾಗಿ ಹಾಡಿದೆ..ದುಂಬಿಯಾಗಿ ಹಾಡಿದೆ
------------------------೨-----------------------
ಜೇನಿಗಿಂತ ಸಿಹಿಯು ನಿನ್ನ..ನಾಮದಲ್ಲಿ ತುಂಬಿದೆ
ಜೇನಿಗಿಂತ ಸಿಹಿಯು ನಿನ್ನ..ನಾಮದಲ್ಲಿ ತುಂಬಿದೆ
ನುಡಿಯೆ ಮಾತು ಸಾಲದು..ಮನವು ಅರಳಿನಲಿವುದು..ಮನವು ಅರಳಿನಲಿಯುವುದು
-----------------------೩------------------------
ಬೆಳದಿಂಗಳ ಮಳೆಯಲ್ಲಿ..ನಡೆವಹಾಗೆ ನನ್ನಲಿ
ಬೆಳದಿಂಗಳ ಮಳೆಯಲ್ಲಿ..ನಡೆವಹಾಗೆ ನನ್ನಲಿ
ಏನೊ ಮಧುರ ಭಾವನೆ..ಏನೊ ಕಂಡ ಕಲ್ಪನೆ..ಏನೊ ಕಂಡ ಕಲ್ಪನೆ
------------------------೪------------------------
ಗಾಳಿಗಿಂತ ಹಗುರವಾಗಿ..ದೂರ ತೇಲಿ ಹೋಗುವೆ
ಗಾಳಿಗಿಂತ ಹಗುರವಾಗಿ..ದೂರ ತೇಲಿ ಹೋಗುವೆ
ಬೆಳಕಿನಲ್ಲಿ ಬೆರೆಯುವೆ..ನಿನ್ನನಾಗಕಾಣುವೆ..ನಿನ್ನನಾಗ ಕಾಣುವೆ
ಏನು ದಾಹ ಯಾವ ಮೋಹ..ಏನು ದಾಹ ಯಾವ ಮೋಹ
ತಿಳಿಯದಾಗಿದೆ..ಸ್ವಾಮಿ
ಇನ್ನು ನಿನ್ನ..ಹೆಸರ ಹೇಳೊ ಆಸೆಯಾಗಿದೆ
No comments:
Post a Comment
Note: Only a member of this blog may post a comment.