ಗಾಯನ : ಬಿ.ಕೆ.ಸುಮಿತ್ರಾ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಆನೆ ಬರ್ತಾವoಥ ಆರು ಕಣಿವೆಯ ಕೊoಡೆ
ಆನೆ ಬರ್ತಾವoಥ ಆರು ಕಣಿವೆಯ ಕೊoಡೆ
ಆನೆಲ್ಲಿ ನಿಮ್ಮ ದಳವೆಲ್ಲಿ
ಆನೆಲ್ಲಿ ನಿಮ್ಮ ದಳವೆಲ್ಲಿ
ನಿಮ್ಮ ಬೀಗರ ಮ್ಯಾಲೆ
ಬೋಳ್ ಹೋರಿ ಮ್ಯಾಲೆ ಬರುತಾನೆ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಒಂಟೆ ಬರ್ತಾವoಥ ಎoಟು ಕಣಿವೆಯ ಕೊoಡೆ
ಒಂಟೆ ಬರ್ತಾವoಥ ಎoಟು ಕಣಿವೆಯ ಕೊoಡೆ
ಒಂಟೇಲಿ ನಿಮ್ಮ ದಳವೆಲ್ಲಿ
ಒಂಟೇಲಿ ನಿಮ್ಮ ದಳವೆಲ್ಲಿ
ಕುಂಟ್ ಹೋರಿ ಮ್ಯಾಲೆ ಬರುತಾನೆ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಬೀಗೀತಿ ಒಳ್ಳೆವಲೆಂದು ದೇವರ ಮನೆ ಕೊಟ್ಟೆ
ಬೀಗೀತಿ ಒಳ್ಳೆವಲೆಂದು ದೇವರ ಮನೆ ಕೊಟ್ಟೆ
ದೇವರ ಜಗುಲಿ ಬಿಟ್ಟು ಕೊಟ್ಟೆ
ದೇವರ ಜಗುಲಿ ಬಿಟ್ಟು ಕೊಟ್ಟೆ
ಬೀಗೀತಿ ದೇವರ ಕದ್ದಾಳೆ ಬಗಲೊಳಗೆ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಬೀಗೀತಿ ಒಳ್ಳೆವಲೆಂದು ಅಡಿಗೆಯ ಮನೆ ಕೊಟ್ಟೆ
ಬೀಗೀತಿ ಒಳ್ಳೆವಲೆಂದು ಅಡಿಗೆಯ ಮನೆ ಕೊಟ್ಟೆ
ಹೋಳಿಗೆ ಚೀಲ ಬಗಲಾಗೆ
ಹೋಳಿಗೆ ಚೀಲ ಬಗಲಾಗೆ
ಅವರಣ್ಣ ನೀಡ್ಲೀಕ್ಕಿಲ್ಲೆಂದು ಕಸುಕೊಂಡ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಎಲ್ಲಾರೂ ಕಟ್ಟ್ಯಾರೆ ಮಲ್ಲೆ ಹೂವಿನ ದಂಡೆ
ಎಲ್ಲಾರೂ ಕಟ್ಟ್ಯಾರೆ ಮಲ್ಲೆ ಹೂವಿನ ದಂಡೆ
ಬೀಗಿತ್ತಿ ಕಟ್ಟ್ಯಾಳೆ ಹುಲ್ ಹೋರಿ
ಅವರಣ್ಣ ಕುದುರೆಗಿಲ್ಲೆಂದು ಕಸುಕೊಂಡ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ
No comments:
Post a Comment
Note: Only a member of this blog may post a comment.