ಚಿಂತೆಯೇಕೆ ಮನವೆ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
ಚಿಂತೆಕಳೆದು ನಿಶ್ಚಿಂತೆಯಿಂದ..ಚಿಂತೆಕಳೆದು ನಿಶ್ಚಿಂತೆಯಿಂದ
ಇರುವಂತೆ ಮಾಡುವ ಚಿಂತಾಮಣಿಯಿರೆ
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
----------------------೧---------------------------
ಭೀತಿಯೇಕೆ ಮನವೆ..ಗುರುರಾಯ ಬಳಿಯಲ್ಲಿ ಇರಲು
ಭೀತಿಯೇಕೆ ಮನವೆ..ಗುರುರಾಯ ಬಳಿಯಲ್ಲಿ ಇರಲು
ಭೀತಿ ಕಳೆದು ನಿರ್ಭೀತಿಯಿಂದ..ಭೀತಿ ಕಳೆದು ನಿರ್ಭೀತಿಯಿಂದ
ಇರುವಂತೆ ಮಾಡುವ..ಗುರುರಾಯನಿರಲು
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
-----------------------೨-----------------------
ದುಖಃ ವೇತಕೆ ಮನವೆ...
ದುಖಃ ವೇತಕೆ ಮನವೆ..ಸದ್ಗುರುನಾಮ ನಿನ್ನಲ್ಲಿರಲು
ದುಖಃ ವೇತಕೆ ಮನವೆ..ಸದ್ಗುರುನಾಮ ನಿನ್ನಲ್ಲಿರಲು
ದುಖಃ ಕಳೆದು ಸುಖನೀಡಲೆಂದೆ..ದುಖಃ ಕಳೆದು ಸುಖನೀಡಲೆಂದೆ
ಗುರುಸಾರ್ವಭೌಮನು ಇರುವಾಗ ನಿನಗೆ
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
----------------------೩------------------------
ಮುಳುಗಬೇಡ ಮನವೆ..ಆಸೆಯ ಕಡಲಲ್ಲಿ ನೀನು
ಮುಳುಗಬೇಡ ಮನವೆ..ಆಸೆಯ ಕಡಲಲ್ಲಿ ನೀನು
ತಾವರೆ ಎಲೆಯು ಜಲರಾಶಿಯಲ್ಲಿ..ತಾವರೆ ಯೆಲೆಯು ಜಲರಾಶಿಯಲ್ಲಿ
ಇರುವಂತೆ ನೀನಿರೆ ಗುರುರಾಜ ಮೆಚ್ಚುವ
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
ಚಿಂತೆಕಳೆದು ನಿಶ್ಚಿಂತೆಯಿಂದ..ಚಿಂತೆಕಳೆದು ನಿಶ್ಚಿಂತೆಯಿಂದ
ಇರುವಂತೆ ಮಾಡುವ ಚಿಂತಾಮಣಿಯಿರೆ
ಚಿಂತೆಯೇಕೆ ಮನವೆ..ಗುರುರಾಘವೇಂದ್ರನಿರಲು
ಗುರುರಾಘವೇಂದ್ರನಿರಲು..ಗುರುರಾಘವೇಂದ್ರನಿರಲು
No comments:
Post a Comment
Note: Only a member of this blog may post a comment.