ಬಂದೆಯ ಗುರುರಾಯ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧
ಕುರುಡನಾದವಗೆ ಕಣ್ಣು ಬಂದಂತೆ
ಬಡವನಾದವಗೆ ಸಿರಿಯು ಒಲೆದಂತೆ
ಬಂದೆಯ ಗುರುರಾಯ...ದಯಮಾಡಿಸೊ ಮಹನೀಯ
ಬಂದೆಯ ಗುರುರಾಯ...ದಯಮಾಡಿಸೊ ಮಹನೀಯ
ಬಂದೆಯ ಗುರುರಾಯ
------------------------೧--------------------------
ಮಾತುಬಾರದೆ ಕಂಠ ಬಿಗಿದಿದೆ..ಕಣ್ಣ ತುಂಬ ಕಣ್ಣೀರು ತುಂಬಿದೆ
ಮಾತುಬಾರದೆ ಕಂಠ ಬಿಗಿದಿದೆ..ಕಣ್ಣ ತುಂಬ ಕಣ್ಣೀರು ತುಂಬಿದೆ
ನಿನ್ನ ಕಂಡ ಆನಂದದಿಂದ..ನನಗೇನು ತೋಚದ ಹಾಗಿದೆ
ಬಂದೆಯ ಗುರುರಾಯ...ದಯಮಾಡಿಸೊ ಮಹನೀಯ
ಬಂದೆಯ ಗುರುರಾಯ
-----------------------೨------------------------
ಮಣೆಯ ಹಾಕಲೆ ಚಾಪೆ ಹಾಸಲೆ...ಪಾದ ತೊಳೆಯಲೆ ಪೂಜೆ ಮಾಡಲೆ
ಮಣೆಯ ಹಾಕಲೆ ಚಾಪೆ ಹಾಸಲೆ...ಪಾದ ತೊಳೆಯಲೆ ಪೂಜೆ ಮಾಡಲೆ
ತುಂಬಿ ಬಂದ ಆವೇಶದಿಂದ..ಈ ಪಾದ ಕಮಲದಲಿ ಭೃಂಗವಾಗಲಿ
ಬಂದೆಯ ಗುರುರಾಯ...ದಯಮಾಡಿಸೊ ಮಹನೀಯ
ಬಂದೆಯ ಗುರುರಾಯ
-----------------------೩---------------------------
ವೇದ ಶಾಸ್ತ್ರವ ಓದಿ ತಿಳಿಯೆನೊ...ದೇವ ಭಾಷೆಯ ಗಂಧವರಿಯೆನು
ವೇದ ಶಾಸ್ತ್ರವ ಓದಿ ತಿಳಿಯೆನೊ...ದೇವ ಭಾಷೆಯ ಗಂಧವರಿಯೆನು
ಏನು ಕಂಡೆಯೊ ಮೂಢನಲ್ಲಿ...ಈ ಕರುಣೆ ಏತಕೊ ಸ್ವಾಮಿ ಕಾಣೆನೊ
ಬಂದೆಯ ಗುರುರಾಯ...ದಯಮಾಡಿಸೊ ಮಹನೀಯ
ಬಂದೆಯ ಗುರುರಾಯ
------------------------೪--------------------------
ಸಿರಿಯ ಕೇಳೆನು ವರವ ಬೇಡೆನು...ಯಾರ ಕುರಿತು ನಾನೇನು ಹೇಳೆನು
ಸಿರಿಯ ಕೇಳೆನು ವರವ ಬೇಡೆನು...ಯಾರ ಕುರಿತು ನಾನೇನು ಹೇಳೆನು
ನಿನ್ನ ಪಾದುಕೆಯ ಶಿರದಿ ಹೊತ್ತು..ಕ್ಷಣ ಕಾಲ ನಿಲ್ಲುವ ಭಾಗ್ಯ ಕೊಡುವೆಯ
ಕರುಣಿಸು ಗುರುರಾಯ...ದಯೆ ತೋರಿಸು ಮಹನೀಯ
ಕರುಣಿಸು ಗುರುರಾಯ...ದಯೆ ತೋರಿಸು ಮಹನೀಯ
ಕರುಣಿಸು ಗುರುರಾಯ
No comments:
Post a Comment
Note: Only a member of this blog may post a comment.