Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Wednesday, January 25, 2012

ಹಾಡು ಕೋಗಿಲೆ (1981) - ಗುರುವಾರ ಬಂತಮ್ಮ

  Sandeep T Gowda       Wednesday, January 25, 2012
ಹಾಡು ಕೋಗಿಲೆ (1981) - ಗುರುವಾರ ಬಂತಮ್ಮ
ಗುರುವಾರ ಬಂತಮ್ಮ | ಚಿ. ಉದಯಶಂಕರ್ | ಭಕ್ತಿಗೀತೆ | ೧೯೮೧

ಹಾಡು ಕೋಗಿಲೆ
ಹಾಡು ಕೋಗಿಲೆ ನಲಿದಾಡು ಕೋಗಿಲೆ
ಹಾಡು ಕೋಗಿಲೆ ನಲಿದಾಡು ಕೋಗಿಲೆ

ರಾಘವೇಂದ್ರ ರಾಘವೇಂದ್ರ..ರಾಘವೇಂದ್ರ ರಾಘವೇಂದ್ರ
ಎಂದು ಹಾಡು ಈಗಲೆ...ಎಂದು ಹಾಡು ಈಗಲೆ

ಹಾಡು ಕೋಗಿಲೆ ನಲಿದಾಡು ಕೋಗಿಲೆ
ರಾಘವೇಂದ್ರ ರಾಘವೇಂದ್ರ..ರಾಘವೇಂದ್ರ ರಾಘವೇಂದ್ರ
ಎಂದು ಹಾಡು ಈಗಲೆ...ಎಂದು ಹಾಡು ಈಗಲೆ

ಹಾಡು ಕೋಗಿಲೆ ನಲಿದಾಡು ಕೋಗಿಲೆ

------------------------೧-------------------------

ಹರಿವ ನದಿಯ ಕಲರವದಲಿ..ಹರಿವ ನದಿಯ ಕಲರವದಲಿ
ನಿನ್ನ ದನಿಯು ಸೇರಲಿ

ಹರಿವ ನದಿಯ ಕಲರವದಲಿ
ನಿನ್ನ ದನಿಯು ಸೇರಲಿ

ಗಾಳಿಯೊಡನೆ ತೇಲಿ ಹೋಗಿ..ಗಾಳಿಯೊಡನೆ ತೇಲಿ ಹೋಗಿ
ದೂರ ದೂರ ಸಾಗಲಿ

ಎಲ್ಲಿ ತಿರುಗಲಲ್ಲಿ ನಿನ್ನ...ಮಧುರ ಗಾನ ಕೇಳಲಿ..ಮಧುರ ಗಾನ ಕೇಳಲಿ

ಹಾಡು ಕೋಗಿಲೆ ನಲಿದಾಡು ಕೋಗಿಲೆ

------------------------೨--------------------------

ಮದುವನರಸಿ ಹೋಗುತಿರುವ..ದುಂಬಿಗಳು ಕೇಳಲಿ
ಮದುವನರಸಿ ಹೋಗುತಿರುವ..ದುಂಬಿಗಳು ಕೇಳಲಿ

ಹೃದಯ ತುಂಬಿ ಬಂದ ದನಿಗೆ
ಹೃದಯ ತುಂಬಿ ಬಂದ ದನಿಗೆ
ತಮ್ಮ ಶೃತಿಯ ಬೆರಸಲಿ

ಹೃದಯ ತುಂಬಿ ಬಂದ ದನಿಗೆ
ತಮ್ಮ ಶೃತಿಯ ಬೆರಸಲಿ

ಕುಸುಮ ಕುಸುಮದಲ್ಲು ಅವನ..ನಾಮ ತುಂಬಿ ಹೋಗಲಿ..ನಾಮ ತುಂಬಿ ಹೋಗಲಿ

ಹಾಡು ಕೋಗಿಲೆ ನಲಿದಾಡು ಕೋಗಿಲೆ

-----------------------೩------------------------------

ನಿನ್ನ ದನಿಯ ಸವಿಯ ಕೇಳಿ..ನಿನ್ನ ದನಿಯ ಸವಿಯ ಕೇಳಿ
ಜೀವ ರಾಶಿ ನಲಿಯಲಿ

ನಿನ್ನ ದನಿಯ ಸವಿಯ ಕೇಳಿ
ಜೀವ ರಾಶಿ ನಲಿಯಲಿ

ಎಲ್ಲ ಮರೆತು ನಿನ್ನ ಸ್ವರಕೆ..ಎಲ್ಲ ಮರೆತು ನಿನ್ನ ಸ್ವರಕೆ
ಕೊರಳ ಬೆರಸಿ ಹಾಡಲಿ
ರಾಘವೇಂದ್ರನೆಂಬ ಧ್ಯಾನ..ಜಗವನೆಲ್ಲ ಕುಣಿಸಲಿ..ಜಗವನೆಲ್ಲ ಕುಣಿಸಲಿ

ಹಾಡು ಕೋಗಿಲೆ ನಲಿದಾಡು ಕೋಗಿಲೆ
ರಾಘವೇಂದ್ರ ರಾಘವೇಂದ್ರ..ರಾಘವೇಂದ್ರ ರಾಘವೇಂದ್ರ
ಎಂದು ಹಾಡು ಈಗಲೆ...ಎಂದು ಹಾಡು ಈಗಲೆ

ಹಾಡು ಕೋಗಿಲೆ ನಲಿದಾಡು ಕೋಗಿಲೆ
logoblog

Thanks for reading ಹಾಡು ಕೋಗಿಲೆ (1981) - ಗುರುವಾರ ಬಂತಮ್ಮ

Previous
« Prev Post

No comments:

Post a Comment

Note: Only a member of this blog may post a comment.