Kannada Song lyrics - ಕನ್ನಡ ಸಾಹಿತ್ಯ - ಕನ್ನಡ ಹಾಡುಗಳ ಲಿರಿಕ್ಸ್ -

ಕನ್ನಡ ಚಲನಚಿತ್ರ ಗೀತೆಗಳ , ಕವನಗಳ , ಜನಪದ ಗೀತೆಗಳ , ವಚನಗಳ , ದಾಸರ ಪದಗಳ , ಭಾವಗೀತೆಗಳ ಸಂಗ್ರಹ ...

Tuesday, January 17, 2012

ಅನಿರೀಕ್ಷಿತ (1970) ಸೊಬಗಿನ ಸೆರೆಮನೆಯಾಗಿಹೆ ನೀನು.......

  Sandeep T Gowda       Tuesday, January 17, 2012
ಅನಿರೀಕ್ಷಿತ | ಕುವೆಂಪು | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ೧೯೭೦
ಸಾಹಿತ್ಯ : ಕುವೆಂಪು
ಸಂಗೀತ : ವಿಜಯಭಾಸ್ಕರ್
ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ

ಸೊಬಗಿನಾ ಸೆರೆಮನೆಯಾಗಿಹೆ ನೀನು
ಚೆಲುವೇ.....ಸರಸತಿಯೇ....
ಅದರಲಿ ಸಿಲುಕಿದಾ ಸೆರೆಯಾಳಾನು
ನನ್ನೆದೆಯಾರತಿಯೇ......

ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ ಹೂವಾಗಿರುವುದು ನನಗಿನ್ನೊಂದಾಸೆ......

ತಾವರೆ ಬಣ್ಣದ ನಿನ್ನಾ ಹಣೆಯಲಿ ಕುಂಕುಮವಾಗಿರಲೆನಗಾಸೆ
ಬಳ್ಳಿಯಲೇಳಿಪ ನಿನ್ನಾ ಕೈಯ್ಯಲಿ ಹೊಂಬಳೆಯಾಗಿರಲೆನಗಾಸೆ
ಪದ್ಮವ ಮುಸುಕಿದ ರೇಸಿಮೆಯಂತಿಹ ಸೀರೆಯ ನಿರಿಯಾಗಿರುವಾಸೆ
ಮನವನು ಸೆಳೆಯುವ ನಿನ್ನಯ ನಡುವಿಗೆ ಕಟಿಬಂಧನವಾಗಿರುವಾಸೆ....{ಪಲ್ಲವಿ}

ನಿನ್ನಾ ಕೈಯ್ಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ
ನಿನ್ನೊಳು ನಾನು ನನ್ನೊಳು ನೀನು ಪ್ರೇಮದಿ ಲಯವಾಗುವುದಾಸೆ
ಚೆಲುವೆ...ಸರಳೆ...ಮುದ್ದಿನ ಹೆಣ್ಣೆ ನಿನ್ನವನಾನಾಗಿರುವಾಸೆ
ಇನ್ನೇನುಸುರಲಿ ಕಾಮನ ಕನ್ನೇ ನನಗಿನ್ನೇನೇನೋ ಆಸೆ.............{ಪಲ್ಲವಿ}
logoblog

Thanks for reading ಅನಿರೀಕ್ಷಿತ (1970) ಸೊಬಗಿನ ಸೆರೆಮನೆಯಾಗಿಹೆ ನೀನು.......

Previous
« Prev Post

No comments:

Post a Comment

Note: Only a member of this blog may post a comment.