ಎಲ್ಲಿಂದಲೋ ಬಂದವರು | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಪಿ. ಲಂಕೇಶ್ | ಭಾವಗೀತೆ | ೧೯೮೦
ಸಾಹಿತ್ಯ: ಪಿ.ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕೆಂಪಾದವೊ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಸುರಿಧ್ಹಾಂಗೆ ಕೆಂಪಾದವೊ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೊ
ಊರು ಕಂದಮ್ಮಗಳು ಕೆಂಪಾದವೊ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೊ
ಊರು ಕಂದಮ್ಮಗಳು ಕೆಂಪಾದವೊ
ಜೊತೆಜೊತೆಗೆ ನಡೆದಗ ನೀಲ್ಯಾಗಿ ನಲಿದಂತ
ಕಾಯುತ್ತ ಕೂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೊ
ನನಗಾಗ ಕೆಂಪಾದವೊ
ನನಗಾಗ ಕೆಂಪಾದವೊ
ಕೆಂಪಾದವೊ ಎಲ್ಲ ಕೆಂಪಾದವೊ
ಕೆಂಪಾದವೊ ಎಲ್ಲ ಕೆಂಪಾದವೊ
No comments:
Post a Comment
Note: Only a member of this blog may post a comment.