ಕುವೆಂಪು | ಗೌರಿ | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ೧೯೬೩
ಸಾಹಿತ್ಯ : ರಾಷ್ಟ್ರಕವಿ ಕುವೆಂಪು
ಸಂಗೀತ : ಜಿ.ಕೆ.ವೆಂಕಟೇಶ್
ಗಾಯನ : ಎಸ್.ಜಾನಕಿ
ರಾಗ : ಮೋಹನ್
ಆ.....ಅ......ಆ......
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....{ಪಲ್ಲವಿ}
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ...ಓ ನನ್ನ ನೆಚ್ಚಿನ ಬಂಧು....{ಪಲ್ಲವಿ}
ವಿಶ್ವಜೀವನವೊಂದು ಪಾರವಿಲ್ಲದ ಸಿಂಧು
ಮೇಲೆತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು...{ಪಲ್ಲವಿ}
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಗ್ನಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ ...ಯಾವ ಜನ್ಮದ ಮೈತ್ರಿ..
No comments:
Post a Comment
Note: Only a member of this blog may post a comment.