ಕುವೆಂಪು | ಚಿತ್ರಗೀತೆ | ಚಿತ್ರಗೀತೆಯಲ್ಲಿ ಕವನ | ಭಾವಗೀತೆ | ಮಾವನ ಮಗಳು | ೧೯೬೫
ಸಾಹಿತ್ಯ : ರಾಷ್ಟ್ರಕವಿ ಕುವೆಂಪು
ಸಂಗೀತ : ಟಿ. ಚಲಪತಿ ರಾವ್
ಗಾಯನ : ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ....ಅವನೇ ವೈಣಿಕ
ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ...ಅವನೇ ವೈಣಿಕ
ಮಿಡಿದನೆನಲು ರಸದ ಹೊನಲು ...
ಮಿಡಿದನೆನಲು ರಸದಹೊನಲು
ಬಿಂದು ಬಿಂದು ಸೇರಿಸಿಂತು
ನಾದ ರೂಪ ತಾ......ನಾದ ರೂಪತಾ.....{ಪಲ್ಲವಿ}
ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ....
ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ...
ನನ್ನ ನಿನ್ನ ಹೃದಯ ವೀಣಾ
ಕಲ್ಲಿಜೇನ ಸೊಗದಸ್ನಾನ...ಅಮೃತಪಾನ....{ಪಲ್ಲವಿ}
No comments:
Post a Comment
Note: Only a member of this blog may post a comment.